ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಂದಿಜ್ವರ: ಆಖಾಡಕ್ಕೆ ಧುಮುಕಲು ಖಾಸಗಿ ಆಸ್ಪತ್ರೆಗಳ ಹಿಂದೇಟು (Private hospitals | H1N1 | Ghulam Nabi | Epidemic Diseases Act)
 
ಹಂದಿಜ್ವರವೆಂಬ ಮಾಹಾಮಾರಿಯು ಭಾರತದಲ್ಲಿ ತಾಂಡವವಾಡಲು ಆರಂಭಿಸಿ ಜನತೆ ಬೆಚ್ಚಿಬೆಚ್ಚಿ ಬೀಳುತ್ತಿರುವಂತೆಯೇ, ಖಾಸಗೀ ಆಸ್ಪತ್ರೆಗಳೂ ಎಚ್1ಎನ್1 ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡುಗಳನ್ನು ಆರಂಭಿಸಬೇಕು, ಇಲ್ಲವಾದರೆ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳ್ಯಾಕೋ ಹಿಂದೇಟು ಹಾಕುತ್ತಿವೆ.

ತಮ್ಮ ಈ ಹಿಂದೇಟಿಗೆ ಅವರ ಬಳಿ ಸಾಕಷ್ಟು ಸಮರ್ಥನೆಗಳಿವೆ. ಪ್ರತ್ಯೇಕ ವಾರ್ಡುಗಳು ಇಲ್ಲದಿರುವುದು, ವಾತಾನುಕೂಲ ಹಾಗೂ ಸಂಶಯಾಸ್ಪದ ಆದಾಯ ಮಾದರಿ ಇವೆಲ್ಲವುಗಳು ಅವರು ಚಿಕಿತ್ಸೆಯಿಂದ ಹಿಂಜರಿಯುವಂತೆ ಮಾಡಿವೆ.

ಆದರೆ ಖಾಸಗಿ ಆಸ್ಪತ್ರೆಗಳ ಈ ಧೋರಣೆಯು ಸರ್ಕಾರವನ್ನು ಸಿಟ್ಟಿಗೆಬ್ಬಿಸಿದೆ. ಇಂತಹ ಆಸ್ಪತ್ರೆಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತವೆ. ಆದರೆ ಅನಿರೀಕ್ಷಿತ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅವುಗಳು ಸ್ಪಂದಿಸುವುದಿಲ್ಲ ಎಂಬುದು ಸರ್ಕಾರದ ಸಿಟ್ಟಿಗೆ ಕಾರಣವಾಗಿದೆ. ಕಮ್ಮಿ ಬೆಲೆಗೆ ಭೂಮಿಯನ್ನು ಪಡೆಯುವುದು ಮುಂತಾದುವುಗಳಿಗೆ ಅವುಗಳು ಅತ್ಯಂತ ಶೀಘ್ರವಾಗಿ ಇವುಗಳು ಸ್ಪಂದಿಸುತ್ತವೆ ಎಂದು ಸರ್ಕಾರ ತನ್ನ ಅಸಮಾಧಾನ ತೋರುತ್ತಾ ಹೇಳಿದೆ. ಅಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ಸಾರ್ವಜನಿಕ ಜವಾಬ್ದಾರಿ ಇಲ್ಲವೇ ಎಂಬುದು ಅವರ ಪ್ರಶ್ನೆ.

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ನಗರದ ಖಾಸಗಿ ಅಸ್ಪತ್ರೆಗಳ ತುರ್ತು ಸಭೆ ಕರೆದಿದ್ದಾರೆ. ಈ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಉತ್ಸಾಹ ತೋರಿವೆ. ಸಭೆಗೆ ಆಹ್ವಾನಿಸಲಾಗಿದ್ದ ಎರಡು ಪೆಥಲಾಜಿಕಲ್ ಲ್ಯಾಬ್‌ಗಳೂ ಸಹ ಪರೀಕ್ಷೆ ನಡೆಸಲು ಇಚ್ಛಿಸುವುದಾಗಿ ಹೇಳಿವೆ.

ಇದು ಖಾಸಗಿ ಆಸ್ಪತ್ರೆಗಳ ನೀಡಬಹುದಾದ ಸಾಮರ್ಥ್ಯ ಹಾಗೂ ಮೂಲಸೌಕರ್ಯಗಳ ಒಂದು ಅಂದಾಜಿನ ಮೌಲ್ಯಮಾಪನವಷ್ಟೆ. ಕೇಂದ್ರವು ಮಾರ್ಗದರ್ಶನ ನೀಡಿದ ಬಳಿಕ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳ ಸೇರ್ಪಡೆಯ ಕುರಿತು ಯೋಜನೆಯನ್ನು ತಯ್ಯಾರಿಸಲಿದ್ದೇವೆ ಎಂದು ಶೀಲಾ ಹೇಳಿದ್ದಾರೆ.

"ಖಾಸಗಿ ಆಸ್ಪತ್ರೆಗಳಿಗೆ ಆಯ್ಕೆ ಇಲ್ಲ. ಪ್ರತ್ಯೇಕ ವಾರ್ಡ್‌ಗಳನ್ನು ಹೊಂದುವ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಸರ್ಕಾರ ಗುರುತಿಸಲಿದೆ. ಇದು ಮುನ್ನೆಚ್ಚರಿಕಾ ಕ್ರಮವಾಗಿ ಅಷ್ಟೆ. ಸರ್ಕಾರಿ ಮೂಲಸೌಕರ್ಯಗಳು ಭರ್ತಿಯಾದರೆ ಮುಂದೇನು. ಖಾಸಗಿ ಆಸ್ಪತ್ರೆಗಳಿಗೆ ಜನರ ಮೇಲೆ ಯಾವುದೇ ಜವಾಬ್ದಾರಿ ಇಲ್ಲವೇ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಪ್ರಶ್ನಿಸುತ್ತದೆ.

ರಾಷ್ಟ್ರದಲ್ಲಿನ ಶೇ.70ರಷ್ಟು ಆರೋಗ್ಯ ಮೂಲಸೌಲಭ್ಯಗಳು ಖಾಸಗಿ ನಿಯಂತ್ರಣದಲ್ಲಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ