ರಾಷ್ಟ್ರದಲ್ಲಿ ಹಂದಿಜ್ವರಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈಯ ಎಲ್ಲಾ ಶಾಲಾಕಾಲೇಜುಗಳು, ಮಾಲ್ ಹಾಗೂ ಮಲ್ಟಿಫ್ಲೆಕ್ಸ್‌ಗಳನ್ನು ಒಂದು ವಾರಗಳ ಕಾಲ ಮುಚ್ಚಲು ಮುಂಬೈ ಸರ್ಕಾರ ಬುಧವಾರ ನಿರ್ಧರಿಸಿದೆ. ಪುಣೆಯಲ್ಲಿ ಶಾಲಾಬಾಲಕನೊಬ್ಬ ಸಾವನ್ನಪ್ಪುವುದರೊಂದಿಗೆ ಈ ಮಹಾಮಾರಿಗೆ ಬಲಿಯಾಗಿರುವವರ ಸಂಖ್ಯೆ 15ಕ್ಕೇರಿದೆ.
"ಮುಂಬೈಯ ಶಾಲೆಗಳು, ಕಾಲೇಜುಗಳು ಮತ್ತು ಖಾಸಗೀ ಕೋಚಿಂಗ್ ಕ್ಲಾಸುಗಳನ್ನು ಮುಂದಿನ ಏಳು ದಿನಗಳ ಕಾಲ ಮುಚ್ಚಲು ಆದೇಶ ನೀಡಿದೆ. ಇದೇ ರೀತಿ ಮಾಲ್‌ಗಳು ಚಿತ್ರಮಂದಿರಗಳನ್ನೂ ಮುಚ್ಚುವಂತೆ ಆದೇಶ ನೀಡಲಾಗಿದೆ. ಇದೇ ವೇಳೆ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸರಳವಾಗಿ ಆಚರಿಸಲು ಜನತೆಯಲ್ಲಿ ರಾಜಕೀಯ ಪಕ್ಷಗಳು ವಿನಂತಿಸಿವೆ.
ಬಾಬು ಕೇನು ಕುಲಂದ್ ಎಂಬ ಶಾಲಾವಿದ್ಯಾರ್ಥಿಯು ಪುಣೆಯಲ್ಲಿ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 15ಕ್ಕೇರಿದೆ. ಮತ್ತು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈತ ಪುಣೆ ಸಮೀಪದ ಪಿಂಪ್ರಿ ಪಟ್ಟಣದ ನಿವಾಸಿಯಾಗಿದ್ದು ಮೂರು ದಿನಗಳ ಹಿಂದೆ ಸಸೂನ್ ಆಸ್ಪತ್ರೆಗೆ ದಾಖಲಾಗಿದ್ದ.
ಇದೇವೇಳೆ ಬುಧವಾರದಂದು ನಾಸಿಕ್‌ನ ಒಬ್ಬರು ವೈದ್ಯ ಹಾಗೂ ಪುಣೆಯ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.