ಶೋಪಿಯಾನ್ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಸಿಬಿಐಗೊಪ್ಪಿಸಲು ಕಾಶ್ಮೀರ ಸರ್ಕಾರ ಬುಧವಾರ ನಿರ್ಧರಿಸಿದೆ. ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಕಾಶ್ಮೀರದ ಸದನವನ್ನು ಅಲ್ಲೋಲ ಕಲ್ಲೋಲವಾಗಿಸುತ್ತಿದೆ.
ಈ ಕುರಿತು ಸರ್ಕಾರ ಅವಿರೋಧ ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರದ ನಿಕಟ ಮೂಲಗಳು ಹೇಳಿವೆ.
ಕೊಲೆ ಪ್ರಕರಣದ ಡಿಎನ್ಎ ಪರೀಕ್ಷೆಯ ವರದಿಗಳನ್ನು ತಿರುಚಲಾಗಿದೆ ಎಂದು ವಿಪಕ್ಷಗಳು ಬುಧವಾರ ಸದನದಲ್ಲಿ ಗಲಾಟೆ ಎಬ್ಬಿಸಿ ಸಭಾತ್ಯಾಗ ನಡೆಸಿರುವುದು, ಪ್ರಶ್ನೋತ್ತರ ಅವಧಿಯನ್ನು ಅಮಾನತ್ತುಗೊಳಿಸುವಂತೆ ಮಾಡಿತು.
ಸದನವು ಸಭೆ ಸೇರುತ್ತಲೆ ಪಿಡಿಪಿ ನಾಯಕಿ ಈ ಕುರಿತು ಚರ್ಚೆಗೆ ಆಗ್ರಹಿಸಿದರು. ಅವರನ್ನು ಅವರ ಪಕ್ಷದ ಸದಸ್ಯರು ಬೆಂಬಲಿಸಿದರು. ಸಿಪಿಐ(ಎಂ) ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದರು. ಆಡಳಿತಾರೂಢ ನ್ಯಾಶನಲ್ ಕಾನ್ಫರೆನ್ಸ್‌ನ ಕೆಲವು ಸದಸ್ಯರೂ ಇದಕ್ಕೆ ಬೆಂಬಲ ಸೂಚಿಸಿದರು.