ಗುರುತಿನ ಚೀಟಿ ಇಲ್ಲದಿರುವುದರಿಂದ ಬಡವರು ಹಾಗೂ ಕಡುಬಡವರು ಕಿರುಕುಳ ಅನುಭವಿಸುವಂತಾಗಿದೆ ಎಂದು ನುಡಿದಿರುವ ಪ್ರಧಾನಿ ಮನಮೋಹನ್ ಸಿಂಗ್, ಬಡವರಿಗೆ ಗುರುತಿನ ಚೀಟಿ ದೊರೆಯುವುದರಿಂದ ರಾಜ್ಯ ಮತ್ತು ಕೇಂದ್ರ ಮಟ್ಟದ ಉತ್ತಮ ಸರ್ಕಾರಿ ಸೌಲಭ್ಯಗಳು ಲಭಿಸಲಿವೆ ಎಂದು ಅಭಿಪ್ರಾಯಿಸಿದ್ದಾರೆ.
ಅವರು ಯುಪಿಎ ಸರ್ಕಾರದ ಮಹತ್ವದ ಗುರುತಿನ ಕಾರ್ಡ್ ಯೋಜನೆ ಕುರಿತ ತಮ್ಮ ಸಚಿವ ಸಂಪುಟದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಗುರುತಿನ ಕಾರ್ಡ್ ಯೋಜನೆಯು ಸವಾಲಿನಿಂದ ಕೂಡಿದ್ದು ಇದನ್ನು ಯಶಸ್ವಿಗೊಳಿಸಲು ರಾಜ್ಯಸರ್ಕಾರಗಳು ಹಾಗೂ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಸಿಂಗ್ ಮನವಿ ಮಾಡಿದ್ದಾರೆ.
ಐಯುಡಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೆಕಣಿ ಅವರು ಅನುಷ್ಠಾನಕ್ಕೆ ರೂಪಿಸಲಾಗಿರುವ ತಂತ್ರಗಳ ಕುರಿತು ವಿವರಿಸಿದರು ಮತ್ತು ಗುರುತಿನ ಕಾರ್ಡ್‌ನಿಂದ ಆಗುವ ಲಾಭಗಳ ಕುರಿತು ವಿವರಿಸಿದರು.