ಗಂಭೀರ ಕ್ಷಾಮ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ದಿನನಿತ್ಯದ ಆಧಾರದಲ್ಲಿ ಪರಿವೀಕ್ಷಣೆ ನಡೆಸಲು ಸಚಿವರ ಸಮೂಹವನ್ನು ಪ್ರಧಾನಿ ಮನಮೋಹನ್ ಸಿಂಗ್ ರೂಪಿಸಿದ್ದಾರೆ.
ಪ್ರಣಬ್ ಮುಖರ್ಜಿ ತಂಡದ ನೇತೃತ್ವವನ್ನು ವಹಿಸಲಿದ್ದಾರೆ. ರಾಷ್ಟ್ರವು ಗಂಭೀರ ಕ್ಷಾಮವನ್ನು ಎದುರಿಸುತ್ತಿದೆ ಎಂಬುದಾಗಿ ಪ್ರಣಬ್ ಇತ್ತೀಚೆಗೆ ಹೇಳಿದ್ದರು. ಕ್ಷಾಮದಿಂದಾಗಿ ಆಹಾರ ಪದಾರ್ಥಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಕನಿಷ್ಠಗೊಳಿಸುವುದು ತಂಡದ ಪ್ರಮುಖ ಕಾರ್ಯವಾಗಿದೆ. ಅಲ್ಲದೆ ಕ್ಷಾಮದಿಂದ ಅತ್ಯಂತ ಕೆಟ್ಟರೀತಿಯಲ್ಲಿ ಬರಪೀಡಿತರಾಗಿರುವ ರೈತರಿರ ಪರಿಸ್ಥಿತಿಯನ್ನು ಸುಧಾರಿಸುವುದು ಇವರ ಕರ್ತವ್ಯವಾಗಿರುತ್ತದೆ.
ಪ್ರಣಬ್ ಅವರಲ್ಲದೆ, ಕೇಂದ್ರ ಕೃಷಿ ಸಚಿವ ಶರದ್ ಪವಾರ್, ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಪೆಟ್ರೋಲಿಯಂ ಸಚಿವ ಮುರಳಿ ದಿಯೋರ, ಇಂಧನ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರುಗಳು ತಂಡದಲ್ಲಿದ್ದಾರೆ.