ಸಾಮಾನ್ಯವಾಗಿ ಮಹಿಳೆಯರು ತಮ್ಮ ಜೀವನದ ಸರಾಸರಿ 16 ತಿಂಗಳನ್ನು ಕಣ್ಣೀರು ಸುರಿಸುತ್ತಾ ಕಳೆಯುತ್ತಾರೆ ಎಂಬುದಾಗಿ ಸಂಶೋಧನಾ ವರದಿಯೊಂದು ಹೇಳಿದೆ.
ಸುಮಾರು ಮೂರು ಸಾವಿರ ಮಹಿಳೆಯರ ಸಮೀಕ್ಷೆ ನಡೆಸಿದ್ದು, ಮೊದಲ ವರ್ಷದಲ್ಲಿ ಅಂದರೆ ಬಾಲ್ಯ ಕಾಲದಲ್ಲಿ ಅವರು ದಿನವೊಂದರ ಮೂರುಗಂಟೆಗಳಷ್ಟು ಕಾಲ ಆಹಾರಕ್ಕಾಗಿ, ಬಟ್ಟೆಬದಲಿಸಲು ಮತ್ತು ಮನರಂಜನೆಗಾಗಿ ಅಳುತ್ತಾರೆ.
ಹದಿಹರೆಯದ ಹುಡುಗಿಯರು ವಾರದಲ್ಲಿ ಸುಮಾರು ಎರಡು ಗಂಟೆ 13 ನಿಮಿಷಗಳ ಕಾಲ ವಿವಿಧ ಕಾರಣಗಳಿಗಾಗಿ ಅಳುತ್ತಾರೆ. ಜೀವನ ಸಂಗಾತಿಯನ್ನು ಕಂಡುಕೊಂಡ ಬಳಿಕ ತಮ್ಮ ಜೀವನದ ಎರಡನೇ ದಶಕದ ಮಧ್ಯಾವಧಿಯ ವೇಳೆ ವಾರ ಒಂದರ ಸ್ತ್ರೀಯರು 2.24 ಗಂಟೆಗಳ ಕಾಲ ಅಳುತ್ತಾರಂತೆ. ಇದಕ್ಕೆ ದುರಂತದ ಸಿನಿಮಾಗಳ ವೀಕ್ಷಣೆ, ಪ್ರೀತಿ ಪಾತ್ರರ ಅಗಲುವಿಕೆ ಮುಂತಾದುವು ಕಾರಣ ಎಂದು ದಿ ಡೇಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತನ್ನು ಜನನದಿಂದ ಹಿಡಿದು 78ರ ವಯಸ್ಸಿನ ತನಕ ಮಹಿಳೆಯರು ಒಟ್ಟು 12,013 ಗಂಟೆಗಳ ಕಾಲ ಅಳುತ್ತಾರೆ.
ಜೀವನದಲ್ಲಿನ ನಾಟಕೀಯ ಬದಲಾವಣೆಗಾಗಿ ಮಹಿಳೆಯರು ಹೆಚ್ಚು ಕಣ್ಣೀರು ಸುರಿಸುತ್ತಾರೆ ಎಂಬುದು ಒಂದು ಅಭಿಪ್ರಾಯವಾದರೆ, ಆಯಾಸ, ದಣಿವು ಮಕ್ಕಳು ಮತ್ತು ಮಹಿಳೆಯರು ಕಣ್ಣೀರು ಸುರಿಸುವ ಪ್ರಮುಖ ಕಾರಣಗಳಲ್ಲಿ ಒಂದು ಎಂಬುದು ಇನ್ನೊಂದಭಿಪ್ರಾಯ.