ಮುಂಬೈಯಲ್ಲಿ ನರಮೇಧ ನಡೆಸಿರುವ ದಾಳಿಕೋರರು ಕರಾಚಿಯಿಂದ ಮುಂಬೈಗೆ ಆಗಮಿಸಲು ಬಳಸಿದ್ದ ಬೋಟಿನ ಯಂತ್ರವನ್ನು ಜಪಾನ್‌ನ ಯಮಹಾ ಮೋಟಾರ್ ಕಂಪೆನಿಯಿಂದ ಆಮದು ಮಾಡಲಾಗಿದೆ.
ಮುಂಬೈದಾಳಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಮುಂದೆ ಗುರುವಾರ ಸಾಕ್ಷಿ ಹೇಳಿದ ಕಂಪೆನಿಯ ಪ್ರತಿನಿಧಿಯು ಈ ಸಾಕ್ಷ್ಯ ನೀಡಿದ್ದಾರೆ. ನ್ಯಾಯಾಲಯವು ನಡೆಸಿದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಈ ಸಾಕ್ಷ್ಯ ನೀಡಿದ್ದಾರೆ. ಎಫ್‌ಬಿಐ ಕಚೇರಿಯು ಲಾಸ್ ಏಂಜಲೀಸ್‌ನಿಂದ ವೀಡಿಯೋ ಕಾನ್ಫರೆನ್ಸ್ ನಡೆಸಿತ್ತು.
ದಾಳಿಯ ವೇಳೆ ಜೀವಂತ ಸೆರೆಸಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸೇರಿದಂತೆ ದಾಳಿನಡೆಸಿರುವ ಹತ್ತು ವೈದ್ಯರು ಮುಂಬೈಗೆ ಆಗಮಿಸಿರುವ ಬೋಟ್‌ಗೆ ಯಮಹಾ ಯಂತ್ರವನ್ನು ಬಳಸಲಾಗಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನದಲ್ಲಿರುವ ಬಿಸ್ನೆಸ್ ಮತ್ತು ಎಂಜೀನಿಯರಿಂಗ್ ಟ್ರೆಂಡ್ಸ್ ಕಂಪೆನಿಗೆ ಯಮಹಾ ಕಂಪೆನಿಯಿಂದ ಈ ಯಂತ್ರವನ್ನು ಕಳೆದ ವರ್ಷ ಜನವರಿ 20ರಂದು ಕಳುಹಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಉಜ್ವಲ್ ನಿಕಂ ಅವರಿಗೆ ಕಂಪೆನಿಯ ಪ್ರತಿನಿಧಿಗೆ ತಿಳಿಸಿದರು.