ತನ್ನ ಗಂಡನ ನಪುಂಸಕತ್ವವನ್ನು ಆತನ ಮನೆಯವರು ಮುಚ್ಚಿಟ್ಟು ತನಗೆ ಮೋಸಮಾಡಿದ್ಧಾರೆ ಎಂದು ದೂರಿರುವ ಗೃಹಿಣಿಯೊಬ್ಬರು ವಿಚ್ಛೇದನದೊಂದಿಗೆ ಒಂದು ಕೋಟಿ ರೂಪಾಯಿ ಪರಿಹಾರ ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ತನ್ನ ಗಂಡನ ವರ್ತನೆಯಿಂದ ತೀವ್ರ ನೊಂದಿರುವ ತಮಿಳ್ನಾಡಿನ ಈ ಮಹಿಳೆ ಪತಿಯ ವಿರುದ್ಧ ದೂರುಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮದುವೆಯಾಗಿ ಒಂದು ವರ್ಷ ಪೂರೈಸಿದರೂ ಆತ ಒಂದೇಒಂದು ರಾತ್ರಿಯನ್ನೂ ತನ್ನೊಂದಿಗೆ ಕಳೆದಿಲ್ಲ. ವಿವಾಹದ ಮೊದಲ ರಾತ್ರಿಯಂದೂ ದೂರವೇ ಇದ್ದ. ಇದಾದ ಬಳಿಕದ ದಿನಗಳಲ್ಲಿ ತನ್ನ ತಂದೆತಾಯಿ ಜತೆ ಮಲಗುತ್ತಿದ್ದ ಎಂದು ಆಕೆ ದೂರಿದ್ದಾರೆ.
ತನ್ನ ಪತಿಗೆ ವಂಶಪಾರಂಪರ್ಯ ನಪುಂಸಕತ್ವ ಇರುವುದು ತಿಳಿದಿದ್ದರೂ ಮನೆಯವರು ಅದನ್ನು ಮುಚ್ಚಿಟ್ಟಿದ್ದರು ಎಂದು ಆಪಾದಿಸಿರುವ ಮಹಿಳೆ ತನಗೆ ಆತನಿಂದ ವಿಚ್ಛೇದನ ಕೊಡಿಸಬೇಕು ಮತ್ತು ಒಂದು ಕೋಟಿ ರೂಪಾಯಿ ಪರಿಹಾರ ಒದಗಿಸಬೇಕು ಎಂದು ಆಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾಳೆ.
ಉತ್ತಮ ಸಂಪಾದನೆ ಇದ್ದ ತನ್ನ ಸಾಫ್ಟ್‌ವೇರ್ ನೌಕರಿಯನ್ನೂ ತಾನು ಪತಿಯ ಮನೆಯವರು ಹೇಳಿದರೆಂದು ಬಿಟ್ಟುಬಿಟ್ಟೆ ಎಂದು ಅವರು ತನ್ನ ದುಃಖ ತೋಡಿಕೊಂಡಿದ್ದಾರೆ.