ಜೈಪುರ: ಅರ್ವತ್ಮೂರನೇ ಸ್ವಾತಂತ್ರೋತ್ಸವದ ಅಂಗವಾಗಿ ರಾಜಸ್ಥಾನ ಸರ್ಕಾರವು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 63 ಕೈದಿಗಳನ್ನು ಬಂಧಮುಕ್ತವಾಗಿಸಲಿದೆ.
ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು ಉತ್ತಮ ನಡತೆ ತೋರಿದ ಕೈದಿಗಳು ನಿಜವಾದ ರಾಷ್ಟ್ರವು 63ನೆ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಪಡೆಯಲಿದ್ದಾರೆ.
ಈ ಕೈದಿಗಳ ಬಿಡುಗಡೆಗಾಗಿ ಗುರವಾರ ಆದೇಶ ನೀಡಲಾಗಿದೆ ಎಂದು ಇಲ್ಲಿ ಅಧಿಕೃತ ವಕ್ತಾರರು ತಿಳಿಸಿದ್ದಾರೆ.