ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಗಾಂಧಿ'ಗಳ ಹೆಸರಿಗೇಕೆ ತಕರಾರಿಲ್ಲ: ಬಿಎಸ್ಪಿ ಪ್ರಶ್ನೆ (Statue | BSP | Cong | Nehru | Gandhi)
 
ಉತ್ತರ ಪ್ರದೇಶದಲ್ಲಿ ಹೋದಲ್ಲೆಲ್ಲ ಮಾಯಾವತಿ ಮತ್ತು ಆನೆಗಳ ಪ್ರತಿಮೆ ನಿಲ್ಲಿಸಿರುವುದನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಕಳುಹಿಸಿರುವ ನೋಟಿಸಿಗೆ ಪ್ರತಿಕ್ರಿಯಿಸಿರುವ ಬಹುಜನ ಸಮಾಜವಾದಿ ಪಕ್ಷವು (ಬಿಎಸ್ಪಿ) ಕಾಂಗ್ರೆಸ್ ಅಧಿಕಾರದಲ್ಲಿರುವಾದ ಹೆಚ್ಚಿನೆಲ್ಲದಕ್ಕೂ ನೆಹರೂ-ಗಾಂಧಿಯ ಹೆಸರನ್ನು ಇರಿಸಿರುವುದನ್ನು ಎಂದಿಗೂ ಯಾಕೆ ಪ್ರಶ್ನಿಸಿಲ್ಲ ಎಂಬುದಾಗಿ ಪ್ರತಿಯಾಗಿ ಪ್ರಶ್ನಿಸಿದೆ.

ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗಲೆಲ್ಲ ಕಾಂಗ್ರೆಸ್ ಪಕ್ಷವು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೋಟ್ಯಂತರ ರೂಪಾಯಿಗಳ ವೆಚ್ಚದ ಸುಮಾರು 450ಕ್ಕೂ ಅಧಿಕ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ರಾಜೀವ್ ಗಾಂಧಿ, ಇಂದಿರಾಗಾಂಧಿ ಅಥವಾ ಜವಾಹರ್‌ಲಾಲ್ ನೆಹರೂ ಅವರುಗಳ ಹೆಸರನ್ನೇ ಯಾಕೆ ಇರಿಸಿದೆ ಎಂಬುದಾಗಿ ಪ್ರಶ್ನಿಸಿದ್ದು, ಇದು ಕಾಂಗ್ರೆಸ್ ಬ್ರಾಂಡನ್ನು ಮತದಾರರಿಗೆ ಮಾರಟಮಾಡಿದಂತಾಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದೆ.

ಬಿಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಚುನಾವಣಾ ಆಯೋಗಕ್ಕೆ ವಿಸ್ತೃತವಾದ ಉತ್ತರ ನೀಡಿದ್ದು ಇದರಲ್ಲಿ ಆನೆಗೂ ಮತ್ತು ಭಾರತೀಯ ನಾಗರಿಕತೆಗೂ ಇರುವ ಸಂಪರ್ಕವನ್ನು ವಿವರಿಸಿದ್ದಾರೆ. ಇದಕ್ಕಾಗಿಯೇ ರಾಷ್ಟ್ರಪತಿ ಭವನ ಹಾಗೂ ಇತರ ಐತಿಹಾಸಿಕ ಸ್ಮಾರಕಗಳು ಹಾಗೂ ದೆಹಲಿಯಲ್ಲಿರುವ ಅಕ್ಷರಧಾಮ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಆನೆಗಳ ಪ್ರತಿಮಗಳನ್ನು ಸ್ಥಾಪಿಸಲಾಗಿದೆ ಎಂದು ಉದಾಹರಿಸುತ್ತಾ ಬಿಎಸ್ಪಿ ಚುನಾವಣಾ ಚಿಹ್ನೆಯಾದ ಆನೆಗಳ ಪ್ರತಿಮೆ ಸ್ಥಾಪನೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ