ವಿವಾದಿತ ಬಾಂಗ್ಲಾ ದೇಶದ ಲೇಖಕಿ ತಸ್ಲೀಮಾ ನಸ್ರೀನ್ ಮುಂದಿನ ವರ್ಷದ ಜನವರಿಯಲ್ಲಿ ಮತ್ತೆ ಭಾರತಕ್ಕೆ ವಾಪಸಾಗಲಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ವೀಸಾ ಅವಧಿ ವಿಸ್ತರಣೆಗಾಗಿ ಅವರು ಭಾರತಕ್ಕೆ ಆಗಮಿಸಿದ್ದರು. ಇದೀಗ ತಸ್ಲೀಮಾ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ. ಹೀಗಾಗಿ, ಅವರು ಈ ತಿಂಗಳಲ್ಲೇ ನ್ಯೂಯಾರ್ಕ್‌ಗೆ ತೆರಳುತ್ತಿದ್ದು, ಮುಂದಿನ ಜನವರಿಯಲ್ಲಿ ಮತ್ತೆ ತಮಗೆ ಆಶ್ರಯ ನೀಡಿದ ಭಾರತಕ್ಕೆ ಆಗಮಿಸಲಿದ್ದಾರೆ.
ಭಾರತ ಸರ್ಕಾರ ತಸ್ಲೀಮಾ ಅವರ ವೀಸಾ ಅವಧಿಯನ್ನು ಮುಂದಿನ ವರ್ಷದ ಫೆ.16ರವರೆಗೆ ವಿಸ್ತರಣೆ ಮಾಡಿದೆ. ಇದಕ್ಕಾಗಿ ಸರ್ಕಾರಕ್ಕೆ ವಂದನೆಗಳನ್ನು ಸಲ್ಲಿಸಿರುವ ತಸ್ಲೀಮಾ, ನ್ಯೂಯಾರ್ಕ್‌ಗೆ ಹೊರಡುವ ದಿನಾಂಕ ತಿಳಿಸಿಲ್ಲ, ನ್ಯೂಯಾರ್ಕ್ ವಿವಿಯಲ್ಲಿ ಈ ವರ್ಷಾಂತ್ಯದವರೆಗೆ ಕಾರ್ಯನಿರ್ವಹಿಸಲಿದ್ದಾರೆ.