ಬಾಲಿವುಡ್ ಸೂಪರ್‌ಸ್ಟಾರ್ ಶಾರೂಕ್ ಖಾನ್ ಅವರನ್ನು ಭಾನುವಾರ ಅಮೆರಿಕದ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಬಂಧನದಲ್ಲಿಟ್ಟು ವಿಚಾರಣೆ ನಡೆಸಿದ ಘಟನೆ ನಡೆದಿದೆ.
9/11 ದಾಳಿ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ವಿಮಾನ ನಿಲ್ದಾಣ ಅಧಿಕಾರಿಗಳ ಅಲರ್ಟ್ ಲಿಸ್ಟ್‌ನಲ್ಲಿ ಖಾನ್ ಸರ್‌ನೇಮ್ ಇದ್ದಿರುವುದೇ ಶಾರುಕ್ ಖಾನ್ ಅವರ ವಿಚಾರಣೆಗೆ ಒಳಪಡಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದರು.
ನ್ಯೂಜೆರ್ಸಿಯಲ್ಲಿ ಭಾರತೀಯರು 63ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ದಿನಾಚರಣೆಯನ್ನು ಆಯೋಜಿಸಿದ್ದು, ಅದಕ್ಕೆ ಶಾರುಕ್ ಖಾನ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆಹ್ವಾನದ ಮೇರೆಗೆ ಅಮೆರಿಕಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಮೆರಿಕದ ಏರ್‌ಫೋರ್ಟ್ ಅಧಿಕಾರಿಗಳು ಸತತ ಎರಡು ಗಂಟೆಗಳ ಸಮಯ ವಿಚಾರಣೆಗೆ ಒಳಪಡಿಸಿದರು.
ಭಾರತೀಯ ರಾಯಭಾರಿಗಳ ಮಧ್ಯಸ್ಥಿಕೆಯಲ್ಲಿ ಶಾರುಕ್ ವಿಚಾರಣೆ ನಡೆಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಆಗಮಿಸಿ ಏರ್‌ಫೋರ್ಟ್ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರಿಗಳಿಗೆ ವಿವರಿಸಿದ ನಂತರ ಕಿಂಗ್ ಖಾನ್ ಅವರನ್ನು ಬಿಡುಗಡೆ ಮಾಡಲಾಯಿತು.
ಶಾರುಕ್ ವಿಮಾನ ನಿಲ್ದಾಣದಲ್ಲಿ ಇಳಿದು ಅಧಿಕಾರಿಗಳು ಅವರ ಹೆಸರನ್ನು ಕಂಪ್ಯೂಟರ್‌ನಲ್ಲಿ ಸೆಕ್ಯುರಿಟಿ ಚೆಕ್‌ಗಾಗಿ ಪರಿಶೀಲಿಸಿದಾಗ ಅದು 'ಖಾನ್' ಸರ್‌ನೇಮ್ ಹಿನ್ನೆಲೆಯಲ್ಲಿ ಕ್ಲಿಯರೆನ್ಸ್ ಕೊಟ್ಟಿಲ್ಲದ ನಂತರ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿಯೇ ಹಲವಾರು ಪ್ರಶ್ನೆಗಳನ್ನು ಕೇಳಿ ಖಾನ್ ಅವರನ್ನು ಸತಾಯಿಸಲಾಗಿತ್ತು. ಅವರ ಹ್ಯಾಂಡ್ ಬ್ಯಾಗ್ ಅನ್ನು ಕೂಡ ಕೂಲಂಕಷವಾಗಿ ಪರಿಶೀಲಿಸಿದರು.
ಒಂದು ಗಂಟೆಗಳ ಕಾಲದಲ್ಲಿ ಒಂದೇ ಒಂದು ಪೋನ್ ಕಾಲ್ ಅನ್ನು ಕೂಡ ಮಾಡಲು ಶಾರೂಕ್‌ಗೆ ಅವಕಾಶ ನೀಡಿರಲಿಲ್ಲವಾಗಿತ್ತು. 'ತಾನು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಹೇಳಿದೆ ನಾನು ಸಿನಿಮಾ ಸ್ಟಾರ್ ಆಗಿದ್ದೇನೆ ಅಲ್ಲದೇ ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್‌ಗಾಗಿ ಅಮೆರಿಕಕ್ಕೆ ಆಗಮಿಸಿದ್ದೆ. ಆದರೆ ಎಷ್ಟೇ ಹೇಳಿದರೂ ಇಮಿಗ್ರೇಶನ್ ಅಧಿಕಾರಿ ಸಮಜಾಯಿಷಿಯನ್ನು ಕೇಳಲೇ ಇಲ್ಲ ಎಂದು ಎಸ್‌ಆರ್‌ಕೆ ತಿಳಿಸಿರುವುದಾಗಿ ನ್ಯೂಸ್ ಡೈಲಿ ವರದಿ ಹೇಳಿದೆ.