ಜನರನ್ನು ಮರೆತು ಯುಪಿಎ ಅಮೆರಿಕಕ್ಕೆ ಹತ್ತಿರವಾಗುತ್ತಿದೆ: ಕಾರಟ್
ಅಗಾರ್ತಲಾ, ಶನಿವಾರ, 15 ಆಗಸ್ಟ್ 2009( 18:35 IST )
PTI
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಯುಪಿಎ ಸರ್ಕಾರ ಮರೆತಿದ್ದು, ಸಾಮಾನ್ಯ ನಾಗರಿಕನನ್ನು (ಆಮ್ ಆದ್ಮಿ) ಕಡೆಗಣಿಸಿ ಅಮೆರಿಕಕ್ಕೆ ಹತ್ತಿರವಾಗುತ್ತಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹರಿಹಾಯ್ದಿದ್ದಾರೆ.
ಪಕ್ಷದ ಮುಖವಾಣಿ 'ದ ಡೈಲಿ ದೇಶೇರ್ ಕಥಾ' ದ 30ನೆ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುಪಿಎ ಸರ್ಕಾರ ವಾಷಿಂಗ್ಟನ್ ಜೊತೆಗಿನ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿದೆ ಎಂದರು.
ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಮೂಲಕ ದೇಶದ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಅವಕಾಶವನ್ನು ಅಮೆರಿಕಕ್ಕೆ ಕೊಡುತ್ತಿದೆ ಎಂದು ದೂರಿದರು. ಅಲ್ಲದೆ, ಯುಪಿಎ ಸರ್ಕಾರ ಆರ್ಥಿಕ ಹಿಂಜರಿತದಿಂದ ಯಾವುದೇ ಪಾಠ ಕಲಿತಿಲ್ಲ. ಲಾಭ ತಂದುಕೊಡುವ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಕಾಯಕದಲ್ಲೇ ಮುಳುಗಿದೆ ಎಂದು ಅವರು ಹೇಳಿದರು.