ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೈಷೆ ಮೊಹಮದ್ ದಿಗ್ಬಂಧನಕ್ಕೆ ಚೀನ ಅಡ್ಡಗಾಲು (United Nations | Masood | Azhar | Terrorist)
 
ಜೈಷೆ ಮೊಹಮದ್ ವಿರುದ್ಧ ದಿಗ್ಬಂಧನಗಳನ್ನು ಹೇರಬೇಕು ಮತ್ತು ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜರ್‌ನನ್ನು ಭಯೋತ್ಪಾದಕನೆಂದು ಘೋಷಿಸಬೇಕೆಂದು ವಿಶ್ವಸಂಸ್ಥೆ ಭದ್ರತಾಮಂಡಳಿಗೆ ಸಲ್ಲಿಸಿದ ಪ್ರಸ್ತಾವನೆಗಳಿಗೆ ಬೆಂಬಲಿಸಬೇಕೆಂಬ ಭಾರತದ ಮನವಿಯನ್ನು ಚೀನ ತಳ್ಳಿಹಾಕಿದೆ.

ಚೀನಾದ ಸ್ಟೇಟ್ ಕೌನ್ಸಿಲರ್ ಡಾಯಿ ಬಿಂಗೊ ಮತ್ತು ರಾಷ್ಟ್ರೀಯ ಭದ್ರತೆ ಸಲಹೆಗಾರ ಎಂ.ಕೆ. ನಾರಾಯಣನ್ ಮಧ್ಯೆ ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಭೇಟಿ ಸಂದರ್ಭದಲ್ಲಿ, ಲಷ್ಕರೆ ನಿಷೇಧಕ್ಕೆ ತಾಂತ್ರಿಕ ಕಾರಣಗಳನ್ನು ಬಿಂಗೊ ನೀಡಿದ್ದಾರೆ.ಘೋಷಣೆಗೆ ತಡೆ ಹಾಕುವ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರವಾಗಿ ನೀಡಬೇಕೆಂದು ಭಾರತ ಈ ಕುರಿತು ಚೀನಾಗೆ ಕೋರಿದೆ. ಮಸೂದ್ ಅಜರ್ ಭಯೋತ್ಪಾದಕನೆಂದು ದೃಢಪಡಿಸುವ ಮಾಹಿತಿಗಳು ತೃಪ್ತಿಕರವಾಗಿಲ್ಲವೆಂದು ಚೀನಾ ಹೇಳಿದೆ.

ಭಾರತ ಮತ್ತು ಚೀನಾ ಭಯೋತ್ಪಾದನೆ ಕುರಿತು ಸಮಾನ ಕಳವಳ ಹೊಂದಿದ್ದು, ಮಸೂದ್ ಅಜರ್‌ನನ್ನು ಬಹಿಷ್ಕರಿಸುವ ಪ್ರಸ್ತಾವನೆಗೆ ಚೀನಾ ಬೆಂಬಲಿಸುವುದೆಂಬ ಆಶಯ ವ್ಯಕ್ತಪಡಿಸುವುದಾಗಿ ಮ‌ೂಲವೊಂದು ತಿಳಿಸಿದೆ.

ಜೈಷೆ ಮೊಹಮದ್ ಭಯೋತ್ಪಾದಕ ಕೃತ್ಯಗಳ ಬಗ್ಗೆ ವಿಸ್ತೃತ ದಾಖಲೆಗಳನ್ನು ಭಾರತ ಈಗಾಗಲೇ ವಿಶ್ವಸಂಸ್ಥೆಗೆ ಸಲ್ಲಿಸಿದ್ದು, ಅದನ್ನು ಚೀನಾ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ವಿತರಿಸಲಾಗಿದೆ. ಆದರೆ ಜೈಷ್ ಮತ್ತು ಅದರ ಮುಖಂಡ ಮಸೂದ್ ಅಜರ್‌ ದಿಗ್ಬಂಧನಕ್ಕೆ ಅಡ್ಡಗಾಲು ಹಾಕುತ್ತಿರುವ ಭದ್ರತಾ ಮಂಡಳಿಯ ಏಕೈಕ ರಾಷ್ಟ್ರ ಚೀನಾ ಎಂದು ಹೇಳಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ