ರಾಜಸ್ಥಾನದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿ ವಸುಂಧರಾ ರಾಜೆ ಅವರು ತಮ್ಮ ಸ್ಥಾನ ತೊರೆಯಬೇಕು ಎಂಬುದಾಗಿ ಬಿಜೆಪಿ ಸಂಸದೀಯ ಮಂಡಳಿಯು ತಾಕೀತು ನೀಡಿದೆ. ಆದರೆ ಯಾವಾಗ ಸ್ಥಾನದಿಂದ ಕೆಳಗಿಳಿಯಬೇಕು ಎಂಬುದಾಗಿ ಸಮಯಮಿತಿ ಹೇರಿಲ್ಲ.
ಈ ಕುರಿತು ನಡೆಸಲಾದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಬದಲಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
"ಪಕ್ಷದ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸಮಯಮಿತಿಯನ್ನು ಪಕ್ಷದ ಉನ್ನತ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗುವುದು. ಮತ್ತು ವಸುಂಧರಾ ಅವರು ಸ್ಥಾನ ತೊರೆಯಬೇಕು ಎಂಬುದಾಗಿ ಅಂತಿಮವಾಗಿ ಹೇಳುವ ಮುನ್ನ ರಾಜ್ಯಕ್ಕೆ ಕೆಲವು ವೀಕ್ಷಕರನ್ನು ಕಳುಹಿಸಲಾಗುವುದು" ಎಂದು ಪಕ್ಷಾಧ್ಯಕ್ಷರು ತಿಳಿಸಿದ್ದಾರೆ. 11 ಸದಸ್ಯರ ಕೋರ್ ಸಮಿತಿ ಸಭೆಯಲ್ಲಿ ನಾಲ್ವರು ಹಾಜರಿರಲಿಲ್ಲ. ಇದಲ್ಲದೆ ವಸುಂಧರಾ ಅವರಿಗೆ ಕೇಂದ್ರ ಬಿಜೆಪಿಯಲ್ಲಿ ಸಾಂಸ್ಥಿಕ ಜವಾಬ್ದಾರಿ ನೀಡಲೂ ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಳೆದ ವಾರದ ಏಕಪಕ್ಷೀಯ ನಡೆಯಲ್ಲಿ ರಾಜನಾಥ್ ಸಿಂಗ್ ಅವರು ವಸುಂಧರಾ ರಾಜೆ ಅವರಿಗೆ ದೂರವಾಣಿ ಕರೆ ನೀಡಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದರು. ಯೋಜಿಸಿರುವಂತೆ ವಸುಂಧರಾ ಅವರು ನಡೆದುಕೊಳ್ಳದ ಕಾರಣ ಅವರಿಗೆ ಕರೆ ನೀಡುವ ಒತ್ತಡ ರಾಜ್‌ನಾಥ್ ಮೇಲಿತ್ತು ಎಂಬುದಾಗಿ ಅವರ ಬೆಂಬಲಿಗರು ಹೇಳಿದ್ದಾರೆ.
ರಾಜಸ್ಥಾನದಲ್ಲಿನ ಒಟ್ಟು 78 ಬಿಜೆಪಿ ಶಾಸಕರಲ್ಲಿ 57 ಮಂದಿ ವಸುಂಧರಾ ಅವರಿಗೆ ಬೆಂಬಲ ನೀಡಿದ್ದಾರೆ. ಮತ್ತು ಎಲ್ಲಾ ನಾಲ್ವರು ಸಂಸದರೂ ಸಹ ಅವರಿಗೆ ಬೆಂಬಲ ಸೂಚಿಸಿದ್ದಾರೆ.