ಭಾರತೀಯ ದಂಡ ಸಂಹಿತೆಯ ಅಧಿನಿಯಮವು 'ಅಸಾಂವಿಧಾನಿಕವಾದುದು' ಮತ್ತು ಮಹಿಳಾಪರವಾಗಿದೆ ಎಂಬುದಾಗಿ ತಮ್ಮ ಪತ್ನಿಯರ ಶೋಷಣೆಯಿಂದ ಮುಕ್ತಿ ಬಯಸುವ ಪುರುಷರ ಸಮೂಹ ಒಂದು ಠರಾವು ಪಾಸು ಮಾಡಿದೆ. ಈ ಶೋಷಿತ ಪತಿಯರು ಕಳೆದೆರಡು ದಿನಗಳಿಂದ ಇಲ್ಲಿ ಸಮಾವೇಶ ನಡೆಸುತ್ತಿದ್ದು, ವಿಚ್ಛೇದಿತ ದಂಪತಿಗಳಿಗೆ ಮಕ್ಕಳ ಮೇಲೆ ಹಂಚುವಿಕೆಯ ಅವಕಾಶ ನೀಡಬೇಕು ಎಂದೂ ಅವರು ಸರ್ಕಾರವನ್ನು ಒತ್ತಾಯಿಸಿದೆ.
"ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498(ಎ) ಅನ್ನು ಅಸಾಂವಿಧಾನಕ ಮತ್ತು ಅದು ವಿವಾಹಿತ ಮಹಿಳೆಯರ ಪಕ್ಷಪಾತಿತನದ್ದು" ಎಂಬುದಾಗಿ ನಿರ್ಣಯ ಪಾಸು ಮಾಡಿರುವುದಾಗಿ ಬೆಂಗಳೂರು ಮೂಲದ ಎನ್‌ಜಿಒ ಎಸ್ಐಎಫ್ಎಫ್ ವಿರಾಗ್ ದುಲಿಯ ಹೇಳಿದ್ದಾರೆ.
ಭಾರತೀಯ ಕುಟುಂಬ ಉಳಿಸಿ ಪ್ರತಿಷ್ಠಾನ(ಎಸ್ಐಎಫ್ಎಫ್) ಎಂಬ ಸರ್ಕಾರೇತರ ಸಂಸ್ಥೆಯೊಂದು ಪುರುಷರ ಹಕ್ಕು ಹಾಗೂ ಕೌಟುಂಬಿಕ ಸೌಹಾರ್ದಕ್ಕಾಗಿ ಹೊರಾಡುತ್ತಿದೆ. ಈ ಸಂಘಟನೆಯು ಶೋಷಿತ ಪುರುಷರ ಈ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸುಮಾರು 25 ಸಂಘಟನೆಗಳ 100 ಮಂದಿ ಪುರುಷರು ಭಾಗವಹಿಸಿದ್ದಾರೆ. ಈ ಸಂಘಟನೆಗಳಲ್ಲಿ 40 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಈ ಸಮ್ಮೇಳನದಲ್ಲಿ ಭಾರತೀಯ ಕಾನೂನಿನಲ್ಲಿರುವ ಹಲವಾರು 'ಲಿಂಗಭೇದ'ಗಳನ್ನು ಗುರುತಿಸಿದ್ದಾರೆ.
ತಮ್ಮ ಹೆತ್ತವರ ವಿಚ್ಛೇದನ ಬಳಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಅನುಕೂಲವಾಗುವಂತೆ ವಿಶೇಷ ಕುಟುಂಬ ನ್ಯಾಯಾಲಯಗಳು ಹಾಗೂ ಪ್ರತ್ಯೇಕ ಸಚಿವಾಲಯಗಳನ್ನು ಸ್ಥಾಪಿಸಬೇಕು ಎಂಬುದಾಗಿ ಸಮ್ಮೇಳನದಲ್ಲಿ ಒತ್ತಾಯಿಸಲಾಗಿದೆ.