ಅತ್ಯಾಚಾರ: ರಾಷ್ಟ್ರಪತಿ ಅಂಗರಕ್ಷಕ ಪಡೆಯ ನಾಲ್ವರು ದೋಷಿಗಳು
ನವದೆಹಲಿ, ಸೋಮವಾರ, 17 ಆಗಸ್ಟ್ 2009( 19:09 IST )
ಆರು ವರ್ಷಗಳ ಹಿಂದೆ ನಡೆದಿದ್ದ ಬುದ್ಧ ಜಯಂತಿ ಪಾರ್ಕ್ ಗುಂಪು ಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಿಗಳೂ ದೋಷಿಗಳು ಎಂಬುದಾಗಿ ದೆಹಲಿಯ ನ್ಯಾಯಾಲಯ ಒಂದು ತೀರ್ಪು ನೀಡಿದೆ. ಇಬ್ಬರ ಮೇಲೆ ಅತ್ಯಾಚಾರದ ದೋಷಾರೋಪ ಮಾಡಲಾಗಿದ್ದರೆ, ಮಿಕ್ಕವರ ಮೇಲೆ ಕಳ್ಳತನದ ಆರೋಪ ಮಾಡಲಾಗಿದೆ.
ಪಿಬಿಜಿ(ರಾಷ್ಟ್ರಪತಿಗಳ ಅಂಗರಕ್ಷಕ ಪಡೆ)ಯ ಅಶ್ವಾರೋಹಿ ದಳದ ಹರ್‌ಪ್ರೀತ್ ಸಿಂಗ್, ಸತ್ಯೇಂದರ್ ಸಿಂಗ್, ಕುಲದೀಪ್ ಸಿಂಗ್ ಮತ್ತು ಮನೀಶ್ ಕುಮಾರ್ ಅವರುಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಹಲವಾರು ಅಧಿನಿಯಮದ ಪ್ರಕಾರ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ದರೋಡೆಯ ಯತ್ನ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
2003ರ ಅಕ್ಟೋಬರ್ ಆರರಂದು ರಾಷ್ಟ್ರಪತಿ ಭವನದ ಸಮೀಪದಲ್ಲಿರುವ ಈ ಉದ್ಯಾನವನಕ್ಕೆ 17ರ ಹರೆಯದ ಬಲಿಪಶು ಯುವತಿ ತನ್ನ ಗೆಳೆಯನ ಜತೆಗೆ ತೆರಳಿದ್ದಳು. ಈ ವೇಳೆಗೆ ಹರ್‌ಪ್ರೀತ್ ಹಾಗೂ ಸತ್ಯೇಂದರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರೆ, ಕುಲ್‌ದೀಪ್ ಹಾಗೂ ಮನೀಶ್ ಇರಿಗೆ ಕಾವಲು ಕಾಯ್ದಿದ್ದರು ಎಂಬುದಾಗಿ ಸರ್ಕಾರಿ ಪೊಲೀಸರು ಹೇಳಿದ್ದಾರೆ.
ಬಲಿಪಶು ಹುಡುಗಿ, ಆಕೆಯ ಗೆಳೆಯ ಸೇರಿದಂತೆ 25 ಮಂದಿ ಪ್ರಕರಣದ ಕುರಿತಂತೆ ಸಾಕ್ಷಿ ಹೇಳಿದ್ದರು.