ಸಿಕಂದರಾಬಾದ್‌ನ ಕಂಟೋನ್ಮೆಂಟ್ ಪ್ರದೇಶದಲ್ಲಿ ಕಾರ್ಮಿಕರು ಶಾಲಾಕಟ್ಟಡ ಸೋಮವಾರ ಮುಂಜಾನೆ ಒಂದರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಮದ್ದುಗುಂಡುಗಳ ಶಸ್ತ್ರಾಗಾರ ಒಂದು ಪತ್ತೆಯಾಗಿದ್ದು ಇದು ಬ್ರಿಟಿಷರ ಕಾಲದ್ದೆಂದು ನಂಬಲಾಗಿದೆ.
ಬಳಿಕ ಪುರಾತತ್ವ ಇಲಾಖೆಯು ಉತ್ಖನನ ನಡೆಸಿದ ವೇಳೆ ಮೂರು ಟ್ರಾಕ್ಟರ್‌ಗಿಂತಲೂ ಅಧಿಕ ಫಿರಂಗಿ ಗುಂಡುಗಳು ಪತ್ತೆಯಾಗಿವೆ ಎಂಬುದಾಗಿ ವರದಿ ತಿಳಿಸಿದೆ. "ಫಿರಂಗಿ ಗುಂಡುಗಳಲ್ಲಿ ಸ್ಫೋಟಕ ಶಕ್ತಿ ತುಂಬಿದೆಯೇ ಎಂಬುದು ಸ್ಪಷ್ಟವಿಲ್ಲ. ನಾವು ಸೇನಾಧಿಕಾರಿಗಳು ಮತ್ತು ಕ್ಷಿಪಣಿ ತಜ್ಞರನ್ನು ಈ ಕುರಿತು ಸಂಪರ್ಕಿಸುತ್ತಿದ್ದೇವೆ" ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ತ್ರಿಶೂಲ್ ಪಾರ್ಕ್ ಪ್ರಾಥಮಿಕ ಶಾಲಾ ನಿರ್ಮಾಣಕ್ಕಾಗಿ ಈ ಕಂಟೋನ್ಮೆಂಟ್ ಅನ್ನು ರಕ್ಷಣಾ ಪ್ರಾಧಿಕಾರವು ಉಡುಗೊರೆಯಾಗಿ ನೀಡಿತ್ತು. ಈ ನಿವೇಶನವು ಬೊಲ್ಲಾರಾಂ ಪೊಲೀಸ್ ಠಾಣೆಯ ಸಮೀಪದಲ್ಲಿದ್ದು, ಇನ್ನೂ ಎಷ್ಟು ಫಿರಂಗಿ ಗುಂಡುಗಳನ್ನು ಹೊರತೆಗೆಯಬೇಕಾಗಿದೆ ಎಂಬುದು ದೃಢಪಟ್ಟಿಲ್ಲ.