ಪಾಕ್‌ನಿಂದ ಅಕ್ರಮ ನುಸುಳುವಿಕೆ ಸಂಚೊದನ್ನು ಬಯಲುಮಾಡಿರುವ ಬಿಎಸ್ಎಫ್ ಸೋಮವಾರ ಒಂಬತ್ತು ಪಾಕಿಸ್ತಾನಿಯರನ್ನು ಬಂಧಿಸಿದೆ. ಗುಜರಾತ್‌ನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದಲ್ಲಿ ಅವರ ಬೋಟ್ ಒಂದನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಭಾರತೀಯ ಪ್ರಾಂತ್ಯದೊಳಗೆ ನುಸುಳಲು ಗಡಿಯುದ್ದಕ್ಕೂ ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ನಮಗೆ ದೊರೆತ ಮಾಹಿತಿಯಾಧಾರದಲ್ಲಿ ನಾವು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ" ಎಂದು ಬಿಎಸ್ಎಫ್ ವಕ್ತಾರರು ಹೇಳಿದ್ದಾರೆ.
"ಎಲ್ಲಾ ಪಾಕಿಗರು ಮಧ್ಯ ವಯಸ್ಕರಾಗಿದ್ದು, ಅವರು ಪ್ರಯಾಣಿಸಲು ಬಳಸಿರುವ ಬೋಟನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಮೀನುಗಾರರಂತೆ ತೋರುತ್ತಿದ್ದರು. ಆದರೆ ಅವರು ನಿಜವಾಗಿಯೂ ಮೀನುಗಾರರಲ್ಲ" ಎಂಬುದಾಗಿ ವಕ್ತಾರರು ತಿಳಿಸಿದ್ದಾರೆ.
ಅವರನ್ನು ತನಿಖೆಗೊಳಪಡಿಸಲಾಗಿದ್ದು, ತನಿಖೆ ಮುಗಿದ ಬಳಿಕವಷ್ಟೆ ಮತ್ತಷ್ಟು ವಿವರಗಳು ಲಭಿಸಲಿವೆ ಎಂದೂ ಅವರು ಹೇಳಿದ್ದಾರೆ.