ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂತರಿಕ ಭದ್ರತಾ ಸಭೆಯಲ್ಲಿ ರಾಜಕೀಯವೇ ಮುಂದೆ! (Internal security | politics | NDA | Congress)
 
ನವದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರದ ಆಂತರಿಕ ಭದ್ರತಾ ಸಭೆಯಲ್ಲಿ ಭದ್ರತೆಯ ವಿಚಾರಕ್ಕಿಂತ ರಾಜಕೀಯವೇ ಹೆಚ್ಚು ಪ್ರಾಶಸ್ತ್ಯ ಪಡೆಯಿತು. ಕಾಂಗ್ರೆಸ್ಸೇತರ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಲವಾರು ವಿಚಾರಗಳನ್ನು ಈ ಸಂದರ್ಭದಲ್ಲಿ ಎತ್ತಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ದುರ್ಬಳಕೆಯ ಅವಕಾಶವನ್ನು ಬೆಟ್ಟು ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ಇದರಿಂದಾಗಿ ರಾಜ್ಯಸರ್ಕಾರದ ಪ್ರದೇಶದೊಳಗೆ ಅತಿಕ್ರಮ ಪ್ರವೇಶ ಮಾಡುವ ಅವಕಾಶ ಲಭಿಸುತ್ತದೆ ಎಂದರಲ್ಲದೆ, ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಕಾಯ್ದೆಯನ್ನು ಕೇಂದ್ರವು ವಿರೋಧಿಸುತ್ತಿರುವುದಕ್ಕೆ ಆಘಾತ ವ್ಯಕ್ತಪಡಿಸಿದರು. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಇಂತಹುದೇ ಕಾಯ್ದೆಗಳಿರುವಾಗ ಇದನ್ನು ವಿರೋಧಿಸುತ್ತಿರುವುದು ಯಾಕೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದರು.

ಮಾಜಿ ಉಪಪ್ರಧಾನಿ ಆಡ್ವಾಣಿ ಅವರು ಆರಂಭಿಸಿದ್ದ ಪೊಲೀಸ್ ನವೀಕರಣ ಯೋಜನೆಗೆ 112 ಕೋಟಿ ರೂಪಾಯಿ ಅಂದಾಜಿಲಾಗಿತ್ತು. ಅದೀಗ 50 ಕೋಟಿ ರೂಪಾಯಿಗೆ ಇಳಿದಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾದ್ ಸಿಂಗ್ ಚೌವಾಣ್ ದೂರಿದರು. ಇಂತಹ ಪ್ರಮುಖ ಯೋಜನೆಗೆ ಕೇಂದ್ರವು ಹೆಚ್ಚು ನಿಧಿಯನ್ನು ಒದಗಿಸುವುದಿಲ್ಲ ಎಂದು ಅವರು ವಿಶಾದ ವ್ಯಕ್ತಪಡಿಸಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ