ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಬಾಯಲ್ಲಿ 'ಶ್ರೀಮತಿ' ಜಯಲಲಿತಾ! (Tamilnadu | Karunanidhi | Jayalalitha | DMK | AIADMK | Politics)
 
Karunanidhi
PTI
ತಮಿಳುನಾಡಿನಲ್ಲಿ ರಾಜಕೀಯ ಎಂಬುದು
Jayalalitha
PTI
ಎಷ್ಟು ಕ್ಷುಲ್ಲಕ ಮತ್ತು ತೀಕ್ಷ್ಣವಾಗಿರಬಹುದು ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಅವಿವಾಹಿತೆ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಮುಖ್ಯಮಂತ್ರಿ, ಬದ್ಧ ರಾಜಕೀಯ ವಿರೋಧಿ ಎಂ.ಕರುಣಾನಿಧಿ ಅವರು ಉದ್ದೇಶಪೂರ್ವಕವಾಗಿ 'ಶ್ರೀಮತಿ' ಎಂದು ಕರೆಯುತ್ತಿದ್ದು, ಇದೀಗ ಎಐಎಡಿಎಂಕೆ ಕಾರ್ಯಕರ್ತರು ಧರಣಿ ಪ್ರತಿಭಟನೆ ನಡೆಸುವ ಹಂತಕ್ಕೂ ಹೋಗಿದೆ.


ವಿಷಯವಿಷ್ಟೆ. ಕರುಣಾನಿಧಿ ಅವರು ಜಯಲಲಿತಾ ಅವರನ್ನು ಸೆಲ್ವಿ (ಕುಮಾರಿ) ಬದಲಾಗಿ ತಿರುಮತಿ (ಶ್ರೀಮತಿ) ಎಂದು ಕರೆಯುತ್ತಿದ್ದಾರೆ. ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ, ಉಳಿದವರೆಲ್ಲರೂ ಜಯಾರನ್ನು ಸೆಲ್ವಿ ಎಂದು ಕರೆದರೂ, ತಾನೇಕೆ ತಿರುಮತಿ ಎಂದೇ ಸಂಬೋಧಿಸುತ್ತೇನೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದ ಕರುಣಾನಿಧಿ, "ಜಯಾ ಅವರು ರಾಜ್ಯದ ಡಿಎಂಕೆ ಸರಕಾರವನ್ನು ಅಲ್ಪಸಂಖ್ಯಾಕ ಸರಕಾರ ಎಂದು ಹೇಳುತ್ತಿದ್ದಾರೆ. ಎಲ್ಲಿವರೆಗೆ ತನ್ನ ಸರಕಾರವನ್ನು ಅಲ್ಪಮತದ ಸರಕಾರ ಅಂತ ಹೇಳುತ್ತಿರುತ್ತಾರೋ, ಅದುವರೆಗೂ ನಾನು ಆಕೆಯನ್ನು ತಿರುಮತಿ ಎಂದೇ ಕರೆಯುತ್ತಿರುತ್ತೇನೆ" ಎಂದಿದ್ದರು!

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಲಲಿತಾ, ತಮಿಳುನಾಡಿನಲ್ಲಿ "ಅಲ್ಪಮತ"ದ ಸರಕಾರದ ನೇತೃತ್ವ ವಹಿಸಿರುವ ಕರುಣಾನಿಧಿ ಅವರು ನನ್ನನ್ನು ಕೆಣಕುವ ನೆಪದಲ್ಲಿ ಭಾರತೀಯ ನಾರಿಯನ್ನು ಅವಮಾನಿಸಿದ್ದಾರೆ ವಿರೋಧ ಪಕ್ಷಗಳ ಕುರಿತು ಕೀಳಾಗಿ ಮಾತನಾಡುವುದು ಕರುಣಾನಿಧಿಗೆ ಸಾಮಾನ್ಯವಾಗಿಬಿಟ್ಟಿದೆ. ವಾಸ್ತವವಾಗಿ ಅವರು ದೇವರನ್ನೂ ಬಿಟ್ಟಿಲ್ಲ. ಆತನ ಈ ವರ್ತನೆಯನ್ನು ಪ್ರತಿಭಟಿಸಿ, ಎಐಎಡಿಎಂಕೆ ಕಾರ್ಯಕರ್ತರು ಚೆನ್ನೈ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿಕೆ ನೀಡಿದ್ದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಿಎಂಕೆಯು ಕಾಂಗ್ರೆಸ್ ಬೆಂಬಲದಲ್ಲಿ ಆಳ್ವಿಕೆ ನಡೆಸುತ್ತಿದೆ. "ಕರುಣಾನಿಧಿ ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಕಷ್ಟು ಕೇಸುಗಳನ್ನು ಜಡಿದಿದ್ದಾರೆ. ನಾನೀಗ 12ಕ್ಕೂ ಹೆಚ್ಚು ಕೇಸುಗಳಲ್ಲಿ ಗೆದ್ದಿದ್ದೇನೆ. ಒಂದು ಕೇಸನ್ನು ಅವರದೇ ಸರಕಾರ ವಾಪಸ್ ತೆಗೆದುಕೊಂಡಿದೆ. ಆದರೆ, ಮಹಿಳೆಗೆ ಮತ್ತು ಸ್ತ್ರೀತ್ವಕ್ಕೆ ಅವಮಾನ ಮಾಡುವ ಈ ಅಲ್ಪಮತೀಯ ಸರಕಾರದ ನಿಲುವು ವಿರೋಧಿಸಿ ಚೆನ್ನೈಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಜಯಲಲಿತಾ ಸೇರಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ