ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 9ರ ಹರೆಯದ ರೇಪಿಸ್ಟ್ ಬಾಲಕ, ಇದು ಮಕ್ಕಳಾಟವಲ್ಲ! (Rape | IPC | Indoora | juvenile court)
 
ಒಂಬತ್ತು ವರ್ಷದ ಬಾಲಕನೊಬ್ಬ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಸಂಭವಿಸಿದ್ದು, ಈತ ರಾಷ್ಟ್ರದ ಅತ್ಯಂತ ಕಿರಿಯ ವಯಸ್ಸಿನ ಅತ್ಯಾಚಾರಿ ಎಂಬ ಕುಖ್ಯಾತಿಗೆ ಒಳಗಾಗಿದ್ದಾನೆ. ಈ ದುರ್ಘಟನೆಯು ಹಿಮಾಚಲ ಪ್ರದೇಶದ ಇಂದೋರಾ(ಕಾಂಗ್ರ) ಎಂಬಲ್ಲಿ ಸಂಭವಿಸಿದೆ.

ಈ ಹುಡುಗ ವಿರುದ್ಧ ಭಾರತೀಯ ದಂಡಸಂಹಿತೆಯ 376ರ(ಅತ್ಯಾಚಾರ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಂದು ರಾತ್ರಿಯನ್ನು ಪೊಲೀಸ್ ಲಾಕಪ್‌ನಲ್ಲಿ ಕಳೆದ ಬಳಿಕ ಆತನಿಗೆ ಬಾಲಾಪರಾಧಿಗಳ ನ್ಯಾಯಾಲಯ ಜಾಮೀನು ನೀಡಿದೆ.

ಹರ್ಯಾಣದ ಶಾಲೆಯಲ್ಲಿ 10ರ ಹರೆಯದ ಮೂವರು ಬಾಲಕರು ಅದೇ ಶಾಲೆಯಲ್ಲಿ ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಸುದ್ದಿ ಹೊರಬಿದ್ದಿರುವ ಮರುದಿನದಂದೇ ಈ ಘಟನೆ ವರದಿಯಾಗಿದೆ. ಈ ಬಾಲಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಈ ಇಬ್ಬರೂ ಇಲ್ಲಿಗೆ ಸಮೀಪದ ಜಾಲೋರ ಮೊಹಲ್ಲಾದಲ್ಲಿರುವ ದಿನಗೂಲಿ ಕಾರ್ಮಿಕರ ಮಕ್ಕಳು. ಪರಸ್ಪರ ಆಟವಾಡುತ್ತಿದ್ದಾಗ ಬಾಲಕ ಈ ದುಷ್ಕೃತ್ಯ ಎಸಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಇಬ್ಬರು ಮಾತ್ರವಿದ್ದರು. ವರ್ಷಗಳ ಕಾಲದಿಂದ ಪರಸ್ಪರ ಪರಿಚಿತರಾಗಿದ್ದ ಈ ಮಕ್ಕಳು ಜತೆಯಲ್ಲೇ ಆಟವಾಡುತ್ತಿದ್ದರು. ಈ ಅನಾಚಾರ ಸಂಭವಿಸಿದ ಭಾನುವಾರದಂದೂ ಸಹ ಹುಡುಗಿಯ ಹೆತ್ತವರು ಕೂಲಿಗೆ ತೆರಳಿದ್ದ ವೇಳೆ ಈ ಇಬ್ಬರೂ ಆಟವಾಡುತ್ತಿದ್ದರು. ಈ ವೇಳೆಗೆ ಹುಡುಗ ಹುಡುಗಿಯನ್ನು ಬಚ್ಚಲು ಮೆನೆಗೆ ಎಳೆದೊಯ್ದು ಅಲ್ಲಿ ಈ ಕುಕೃತ್ಯ ಎಸಗಿದ್ದಾನೆ.

ಬಾಲಕಿಯು ಪ್ರತಿಭಟಿಸಿ ಹೋರಾಟನಡೆಸಿದಾಗ ಈ ಹುಡುಗ ಆಕೆಯನ್ನು ಥಳಿಸಿ, ಹಿಂಸಿದ್ದಾನೆ ಎಂಬುದಾಗಿ ಇಂದೋರಾ ಪೊಲೀಸ್ ಠಾಣೆಯ ಅಧಿಕಾರಿ ರಮೇಶ್ ರಾಣಾ ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯ ಹೆತ್ತವರು ನೀಡಿರುವ ದೂರಿನಾಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಲಿಮುಗಿಸಿ ಸಾಯಂಕಾಲ ಮನೆಗೆ ಹಿಂದುರುಗಿದಾಗ ತಮ್ಮ ಪುತ್ರಿ ಅಳುತ್ತಿದ್ದುದು ಕಂಡು ಬಂದಿತ್ತು. ಆಕೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.

ಈ ಎರಡೂ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಬಾಲಕಿಯು ಪ್ರತಿಭಟಿಸಿ ಹೋರಾಟ ನಡೆಸಿದ್ದ ವೇಳೆ ಹುಡುಗನ ದೇಹದಲ್ಲೂ ಗಾಯಗಳು ಕಂಡು ಬಂದಿವೆ. ದೂರುಬಂದಿರುವ ತಕ್ಷಣ ಹುಡುಗನನ್ನು ಬಂಧಿಸಲಾಗಿದ್ದು, ಬಳಿಕ ಬಾಲಾಪರಾಧಿಗಳ ನ್ಯಾಯಾಲಯ ಜಾಮೀನು ನೀಡಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ