ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಅಧಿಕಾರಿ ಎರಡೂಕೈಯಲ್ಲಿ 125 ತರಹ ಬರೆಯುತ್ತಾರೆ (Calligraphic | Government official | Ravi Prakash | Handwriting)
 
ಎಲ್ಲಾ ಶುರವಾದದದ್ದು ಹೀಗೆ. ಅವರ ಕೈಬರಹ ಅತ್ಯಂತ ಕೆಟ್ಟದ್ದಾಗಿತ್ತು. ಹಾಗಾಗಿ ಇದನ್ನು ಉತ್ತಮ ಪಡಿಸಲು ಶಾಲೆಯಲ್ಲಿ ಮಾಡಿದ ಪ್ರಯತ್ನ ಅಪರೂಪವಾದ ಕೈಬರಹ ಕಲೆಯಾಗಿ ಅರಳಿದೆ. ಸರ್ಕಾರಿ ಅಧಿಕಾರಿಯಾಗಿರುವ ರವಿಪ್ರಕಾಶ್ ಸಾರಸ್ವತ್(50) ಅವರು ತಮ್ಮ ಎರಡೂ ಕೈಗಳಲ್ಲಿ ದುಂಡುದುಂಡಾಗಿ ಬರೆಯಲು ಶಕ್ತರಾಗಿದ್ದಾರೆ. ಅಲ್ಲದೆ 125 ಶೈಲಿಯನ್ನು 'ಕೈಗತ' ಮಾಡಿಕೊಂಡಿರುವ ರವಿಪ್ರಕಾಶ್ ಇದೀಗ ದಾಖಲೆ ಪುಸ್ತಕಗಳ ಮೇಲೆ ಕಣ್ಣಿಟ್ಟಿದ್ದಾರೆ.

ಉತ್ತರಪ್ರದೇಶದ ಬದೌನ್ ಜಿಲ್ಲೆಯವರಾಗಿರುವ ಇವರು, ತಮ್ಮ ಎರಡೂ ಕೈಗಳಲ್ಲಿ ಲೀಲಾಜಾಲವಾಗಿ ವಿವಿಧ ಶೈಲಿಗಳಲ್ಲಿ ಬರೆಯುತ್ತಾರೆ. ಇವರು ಬರೆಯುತ್ತಿರುವುದನ್ನು ನೋಡಿದವರ ಹುಬ್ಬುಗಳು ಮೇಲೇರುತ್ತವೆ.

"ಇದು ನನಗೆ ತುಂಬ ಇಷ್ಟ. ಇಂಗ್ಲೀಷ್ ಮತ್ತು ಹಿಂದಿಗಳಲ್ಲಿ ಬೇರೆಬೇರೆ ರೀತಿಯ ಕೈಬರಹ ಮೂಡಿಸುವುದು ಬಾಲ್ಯದಿಂದಲೂ ನನ್ನ ಹವ್ಯಾಸ ಮತ್ತು ಪ್ರೀತಿ" ಎಂಬುದಾಗಿ 125 ರೀತಿಯ ಕೈಬರಹ ಮೂಡಿಸಬಲ್ಲ ಸಾರಸ್ವತ್ ಅವರು ಹೇಳುತ್ತಾರೆ. ಕಳೆದ 35 ವರ್ಷಗಳಿಂದ ವಿವಿಧ ರೀತಿಯಲ್ಲಿ ಬರೆಯುವುದನ್ನು ನಾನು ಅಭ್ಯಾಸ ಮಾಡುತ್ತಿದ್ದೇನೆ. ಬರಿಯ ಅಭ್ಯಾಸಬಲದಿಂದಲೇ ನಾನೀಗ ಎರಡೂ ಕೈಗಳಲ್ಲಿ ಸುಲಭವಾಗಿ ಬರೆಯ ಬಲ್ಲೆ ಎಂಬುದು ಅವರ ಅನುಭವ.

ಸಾರಸ್ವತ್ ಅವರು ಯಾವುದೇ ದಿಕ್ಕಿನಿಂದ ಬರೆಯಬಲ್ಲರು. ಒಳಕ್ಕೆ ಬಾಗಿದ, ಹಿಂದಕ್ಕೆ ಅಥವಾ ಕೇಳಗಿಂದ ಮೇಲೆ ಹೇಗೂ ಬರೆಯಬಲ್ಲರು. "ನೀವು ನನ್ನ ಎದುರು ಕುಳಿತಿದ್ದರೆ, ನಿಮ್ಮ ಭಂಗಿ ಬದಲಿದೆ ಓದುವಂತೆ ಅಕ್ಷರಗಳನ್ನು ಬರೆಯಬಲ್ಲೆ. ಎರಡೂ ಕೈಗಳಲ್ಲಿ ಏಕಕಾಲಕ್ಕೆ ವಿವಿಧ ಅಕ್ಷರಗಳನ್ನು ಮೂಡಿಸಬಲ್ಲೆ" ಎಂಬುದಾಗಿ ಬದೌನ್ ಜಿಲ್ಲೆಯ ಹೆಚ್ಚುವರಿ ನ್ಯಾಯಾಧೀಶರ ಆಪ್ತಕಾರ್ಯದರ್ಶಿ ಸಾರಸ್ವತ್ ಹೇಳುತ್ತಾರೆ.

ಲಿಮ್ಕಾ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ದಾಖಲಾಗಲು ಅವರೀಗಾಗಲೇ ಅರ್ಜಿಹಾಕಿದ್ದು, ಅವರ ಅರ್ಜಿ ಸ್ವೀಕಾರವೂ ಆಗಿದೆ. ಒಂದಿಲ್ಲ ಒಂದು ದಿನ ತನ್ನ ಹೆಸರು ದಾಖಲೆ ಪುಸ್ತಕದಲ್ಲಿ ಸೇರಲಿದೆ ಎಂಬುದು ಈ ಅಪರೂಪದ ಕಲೆಗಾರನ ಆಶಯ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ