ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬರಸ್ಥಿತಿ ಪರಾಮರ್ಷೆಗೆ ಸಿಡಬ್ಲ್ಯುಸಿ ಸಭೆ (CWC | Drought situation | Country | New Delhi)
 
ರಾಷ್ಟ್ರಾದ್ಯಂತ ತಲೆದೋರಿರುವ ಬರಸ್ಥಿತಿಯನ್ನು ನಿಭಾಯಿಸಲು ರೂಪುರೇಷಗಳನ್ನು ರೂಪಿಸಲು ಕಾಂಗ್ರೆಸ್ ಕ್ರಿಯಾ ಸಮಿತಿಯು ಬುಧವಾರ ನವದೆಹಲಿಯಲ್ಲಿ ಸಭೆ ಸೇರಿತು. ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರಬರುತ್ತಲೇ ಕಳವಳಕಾರಿ ಎಂಬಂತೆ ತಲೆದೋರಿರುವ ಬರಪರಿಸ್ಥಿತಿಯು ಪಕ್ಷದಲ್ಲಿ ಚಿಂತೆಗೆ ಕಾರಣವಾಗಿದೆ.

ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತರ ಪ್ರಮುಖ ನಾಯಕರು ಭಾಗವಹಿಸಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಕ್ರಮಗಳನ್ನು ಚುರುಕುಗೊಳಿಸುವಂತೆ ಸರ್ಕಾರವನ್ನು ವಿನಂತಿಸಲು ನಿರ್ಧರಿಸಲಾಗಿದೆ.

ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಸದ್ಯವೇ ಚುನಾವಣೆ ನಡೆಯಲಿದ್ದು, ಈ ನಾಲ್ಕೂ ರಾಜ್ಯಗಳನ್ನು ಅರೆವಾಸಿ ಅಥವಾ ಸಂಪೂರ್ಣ ಬರಪೀಡಿತ ಎಂದು ಘೋಷಿಸಲಾಗಿರುವುದು ಕಾಂಗ್ರೆಸ್‌ಗೆ ಚಿಂತೆಗೆ ಕಾರಣವಾಗಿದೆ.

ಕಾಂಗ್ರೆಸ್ ಆಡಳಿತವಿರುವ ಆಂಧ್ರಪ್ರದೇಶ, ಹರ್ಯಾಣ, ಗೋವಾ, ರಾಜಸ್ಥಾನ, ದೆಹಲಿ ಮತ್ತು ಅಸ್ಸಾಂಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಇದಲ್ಲದೆ, ಕೇಂದ್ರ ಸಚಿವರಾದ ಪ್ರಣಬ್ ಮುಖರ್ಜಿ, ಎ.ಕೆ. ಆಂಟಸಿ, ಪಿ. ಚಿದಂಬರಂ ಹಾಗೂ ವೀರಪ್ಪ ಮೊಯ್ಲಿ ಭಾಗವಹಿಸಿದ್ದರು.

ರಾಷ್ಟ್ರವು ಶೇ.29ರಷ್ಟು ಮಳೆಯ ಕೊರತೆ ಎದುರಿಸುತ್ತದೆ. ಸುಮಾರು 207ಕ್ಕಿಂತಲೂ ಅಧಿಕ ಜಿಲ್ಲೆಗಳು ಬರಪೀಡಿತ ಎಂದು ಘೋಷಿಸಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ