ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ಡಕಾಯಿತನಿಂದ ಮಾಯ ಮಾದರಿಯ ಪ್ರತಿಮೆ! (Uttar Pradesh | Dacoit | Maya-style | Statue)
 
ಒಂದು ಕಾಲದಲ್ಲಿ ಅತ್ಯುಗ್ರ ಡಕಾಯಿತನಾಗಿದ್ದ ವ್ಯಕ್ತಿಯೊಬ್ಬ ತನ್ನದೇ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿದ್ದು ಅದನ್ನು ತನ್ನದೇ ಮನೆಯ ಎದುರು ಅನಾವರಣಗೊಳಿಸಲು ನಿರ್ಧರಿಸಿದ್ದಾನೆ. ಈತ ಇದೀಗ ತನ್ನ ಕಾನೂನು ಬಾಹಿರ ಕೃತ್ಯಗಳನ್ನು ತೊರೆದು ಸಮಾಜದ ಮುಖ್ಯವಾಹಿನಿಯನ್ನು ಸೇರಿ 'ಗಣ್ಯವ್ಯಕ್ತಿಯಾಗಿ' ಹೊಸ ಜೀವನ ಆರಂಭಿಸಿದ್ದಾನೆ.

"ನಾನು ನನ್ನ ಪ್ರತಿಮೆಯನ್ನು ನನ್ನ ಮನೆಯ ಹೊರಗಡೆ ನಿರ್ಮಿಸಲು ನಿರ್ಧರಿಸಿದ್ದೇನೆ. ನನ್ನ ಮರಣಾನಂತರ ಜನತೆ ಈ ಮೂಲಕ ತನ್ನನ್ನು ಸ್ಮರಿಸಿಕೊಳ್ಳಬಹುದು. ಈ ಪ್ರತಿಮೆಯನ್ನು ಸಿಮೆಂಟ್‌ನಿಂದ ನಿರ್ಮಿಸಲಾಗಿದ್ದು ಆರು ಅಡಿ ಎತ್ತರವಿದೆ" ಎಂಬುದಾಗಿ ಜಗನ್ನಾಥ್ ಬಿಂದ್ ಎಂಬ ಮಾಜಿ ಡಕಾಯಿತ ಹೇಳುತ್ತಾನೆ. ಒಂದು ಕಾಲದಲ್ಲಿ ಈತನ ವಿರುದ್ಧ 32 ಪ್ರಕರಣಗಳು ದಾಖಲಾಗಿವೆ.

ಇನ್ನೂ ಜೀವಂತ ಇರುವಾಗಲೇ ಪ್ರತಿಮೆ ನಿರ್ಮಿಸುವ ಅವಶ್ಯಕತೆ ಏನು ಎಂಬುದಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಂದ್, "ಜನರು ಅವರವರದ್ದೇ ಪ್ರತಿಮೆ ನಿರ್ಮಿಸಿಕೊಳ್ಳುವಾಗ ನಾನ್ಯಾಕೆ ಮಾಡಬಾರದು" ಎಂಬುದಾಗಿ ಮರುಪ್ರಶ್ನಿಸುತ್ತಾನೆ.

ದರೋಡೆಕೋರನ ಬದುಕನ್ನು ತೊರೆದು ಸಂತನಾದ ಮಹರ್ಷಿ ವಾಲ್ಮಿಕಿಯಿಂದ ತಾನು ಪ್ರಭಾವಿತನಾಗಿರುವುದಾಗಿ ಹೇಳುವ ಆತ, "ಒಂದೊಮ್ಮೆ ಭಯಂಕರ ದರೋಡೆಕೋರನಾಗಿದ್ದ ವಾಲ್ಮಿಕಿಯ ಮನಸ್ಸೇ ಬದಲಾಗಿರುವಾಗ ಜಗನ್ನಾಥನ ಹೃದಯವೇಕೆ ಬದಲಾಗಬಾರದು" ಎಂಬುದಾಗಿಯೂ ಪ್ರಶ್ನಿಸುತ್ತಾನೆ.

ಇದಲ್ಲದೆ, ಈತ ಸ್ಥಳೀಯಾಡಳಿತೆಯ ಪ್ರತಿಕ್ರಿಯೆಯ ಬಗ್ಗೆಯೂ ಚಿಂತಿತನಾಗಿಲ್ಲ. "ನಾನು ನನ್ನ ಮನೆಯ ಎದುರು ಪ್ರತಿಮೆಯನ್ನು ನಿಲ್ಲಿಸುತ್ತೇನೆ. ಇದು ನನ್ನ ಸ್ವಂತ ಜಾಗವಿದ್ದು ಇದಕ್ಕೆ ಯಾರದ್ದೂ ಅಡ್ಡಿ ಇರಲಾರದು. ಇದಕ್ಕೆ ಅನುಮತಿ ಇಲ್ಲವಾದರೆ ನಾನು ನ್ಯಾಯಾಲಕ್ಕೆ ತೆರಳುತ್ತೇನೆ" ಎಂಬುದಾಗಿ ಆತ ಹೇಳುತ್ತಾನೆ.

"ತನ್ನ ಆರಂಭಿಕ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಹೆಚ್ಚಿನ ಪ್ರಕರಣಗಳಲ್ಲಿ ನನ್ನ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ. ನನ್ನ ಹೆತ್ತವರನ್ನು ನಾನು ತುಂಬ ಚಿಕ್ಕವನಿರುವಾಗಲೇ ಕಳಕೊಂಡೆ. ಅಗತ್ಯ ವಿಧಿವಿಧಾನಗಳನ್ನು ನಡೆಸಿದ ಬಳಿಕ ಮಕ್ಕಳು ತಮ್ಮ ಹೆತ್ತವರನ್ನು ಮರೆತೇ ಬಿಡುತ್ತಾರೆ. ಇದು ನನ್ನಲ್ಲಿನ ಪರಿವರ್ತನೆಯ ಭಾವನೆಗೆ ಸಹಾಯವಾಗುತ್ತದೆ" ಎಂಬುದಾಗಿ ಇದೀಗ 59ರ ಹರೆಯದ ಜಗನ್ನಾಥ್ ಹೇಳುತ್ತಾನೆ. ಈತ 50 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾನೆ.

ಕೂಂತಿ ಎಂಬುದಾಗಿಯೂ ಕರೆಸಿಕೊಳ್ಳುವ ಈತ ವಾರಣಾಸಿ, ಬಹದೋಹಿ, ಅಲಹಾಬಾದ್ ಮತ್ತು ಮಿರ್ಜಾಪುರ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಜೈಲುಗಳಲ್ಲಿ ಬಂಧಿಯಾಗಿದ್ದ. ಈ ಎಲ್ಲಾ ಡಕಾಯಿತರಂತೆ 1980ರಲ್ಲಿ ಈತನೂ ಚುನಾವಣೆಗೆ ಸ್ಫರ್ಧಿಸಿದ್ದ. 1987ರ ತನಕ ಗ್ರಾಮದ ಮುಖ್ಯಸ್ಥನಾಗಿದ್ದ. 1980ರಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಪಾರಾಗಿದ್ದ.

ಪಂಚಾಲ್ ಕೇವತ್ ಎಂಬ ಗ್ರಾಮಸ್ಥನೊಬ್ಬ ಈ ಸುಧಾರಿತ ಡಕಾಯಿತನನ್ನು ಹೊಗಳಿ ಪದ್ಯಬರೆಯುತ್ತಿದ್ದಾನೆ. ಈತ 'ಜಗನ್ನಾಥ ಚಾಲಿಸ'ವನ್ನು ಸಿದ್ಧಪಡಿಸುತ್ತಿದ್ದಾನೆ. ಈತ ತನ್ನ ಪ್ರತಿಮೆಯ ಪಕ್ಕದಲ್ಲಿ ಭಗವಾನ್ ಹನುಮಂತನ ಪ್ರತಿಮೆಯನ್ನೂ ನಿಲ್ಲಿಸುತ್ತಾನೆ. ಮತ್ತು ಪ್ರತಿಮೆಯನ್ನು ಆತನ ಮನೆಯ ಪ್ರವೇಶದ್ವಾರದಲ್ಲಿ ನಿಲ್ಲಿಸಲಾಗುತ್ತದೆ ಎಂಬುದಾಗಿ ಕೇವತ್ ಹೇಳುತ್ತಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ