ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗಳೂರಿನಲ್ಲಿ ಮತ್ತೆರಡು ಸಾವು; ಹಂದಿಜ್ವರಕ್ಕೆ 35 ಬಲಿ (Swine Flu | Karnataka | India | Udupi)
 
ಮಹಾರಾಷ್ಟ್ರದಲ್ಲಿ 19, ಕರ್ನಾಟಕದಲ್ಲಿ ಏಳು, ಗುಜರಾತ್‌ನಲ್ಲಿ ಮೂರು, ಛತ್ತೀಸ್‌ಗಢದಲ್ಲಿ ಎರಡು ಹಾಗೂ ತಮಿಳುನಾಡು, ಕೇರಳ, ಉತ್ತರಾಂಚಲದಲ್ಲಿ ತಲಾ ಒಬ್ಬೊಬ್ಬರು ಎಚ್1ಎನ್1ಗೆ ಸೋಂಕು ತಗುಲಿ ಸಾವನ್ನಪ್ಪುವುದರೊಂದಿಗೆ ಇದುವರೆಗೆ ದೇಶದಲ್ಲಿ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ 35ಕ್ಕೇರಿದೆ.

ಪುಣೆಯಲ್ಲಿ 24ರ ಹರೆಯದ ಬಿ.ಟೆಕ್ ವಿದಾರ್ಥಿ ಹಾಗೂ 52ರ ಹರೆಯದ ವ್ಯಕ್ತಿಯೊಬ್ಬರು ಎಚ್1ಎನ್1ಗೆ ಬಲಿಯಾಗಿದ್ದಾರೆಂದು ಶಂಕಿಸಲಾಗಿದೆ. ಬೆಂಗಳೂರಿನಲ್ಲಿ 45ರ ಹರೆಯದ ವ್ಯಕ್ತಿ ಹಾಗೂ 36ರ ಹರೆಯದ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆಯೂ ವರದಿಗಳು ಬಂದಿವೆ. ಇದರೊಂದಿಗೆ ಒಟ್ಟು ಬಲಿಯಾದವರ ಸಂಖ್ಯೆ 35 ಎಂದು ತಿಳಿದು ಬಂದಿದೆ.

ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಆಗಸ್ಟ್ 15ರಂದು ದಾಖಲಾಗಿದ್ದ ವ್ಯಕ್ತಿಯೊಬ್ಬರು ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವುದು ಎಚ್1ಎನ್1 ಸೋಂಕಿನಿಂದ ಎಂದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಅವರಿಗೆ ಟ್ಯಾಮಿಫ್ಲೂ ಮಾತ್ರೆಗಳನ್ನು ನೀಡಲಾಗಿದ್ದರೂ ಗುಣಮುಖರಾಗಿರಲಿಲ್ಲ.

ಮತ್ತೊಬ್ಬ ಮಹಿಳೆ ಆಗಸ್ಟ್ 17ರಂದು ಸಾವನ್ನಪ್ಪಿದ್ದಾರೆ. ಅವರು ಎಂಎಸ್ ರಾಮಯ್ಯ ಆಸ್ಪತ್ರೆಗೆ ಆಗಸ್ಟ್ 14ರಂದು ದಾಖಲಾಗಿದ್ದರು. ಟ್ಯಾಮಿಫ್ಲೂ ಮಾತ್ರೆಗಳನ್ನು ಅವರಿಗೂ ನೀಡಲಾಗಿತ್ತು. ತುರ್ತು ನಿಗಾ ಘಟಕದಲ್ಲಿದ್ದ ಅವರನ್ನು ಬದುಕಿಸಲಾಗಲಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಉಮಾ ವಸಂಕರ್ ತಿಳಿಸಿದ್ದಾರೆ.

ಬುಧವಾರ ಹೊಸ 216 ಪ್ರಕರಣಗಳು ದೇಶದಾದ್ಯಂತ ಪತ್ತೆಯಾಗಿದ್ದು, ಜ್ವರ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,242ಕ್ಕೇರಿದೆ. ಮುಂಬೈಯಲ್ಲಿ 48, ಪುಣೆ 36, ಚೆನ್ನೈ 30 ಹಾಗೂ ದೆಹಲಿಯಲ್ಲಿ 25 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಬೆಂಗಳೂರಿನಲ್ಲಿ 17, ನಾಗ್ಪುರದಲ್ಲಿ 13, ಕೊಯಂಬತ್ತೂರಿನಲ್ಲಿ 9, ಧೂಲೆಯಲ್ಲಿ 5, ಗೋರೆಗಾಂವ್, ನಾಸಿಕ್, ಲಾತೂರ್, ಔರಂಗಾಬಾದ್, ರಾಜ್‌ಕೋಟ್‌ಗಳಲ್ಲಿ ತಲಾ ಮೂರು, ನಾನೇದ್, ರತ್ನಗಿರಿ, ಬೀದ್, ಸೂರತ್‌ಗಳಲ್ಲಿ ತಲಾ ಎರಡು, ಅಹ್ಮದ್‌ನಗರ್, ಖೋಲಾಪುರ್, ಸತಾರಾ, ದಿಬುರ್ಗರ್, ಜಾಮ್ನಾನಗರ್, ವಡೋದರ, ಅಹಮದಾಬಾದ್, ದಾಮನ್, ಮಂಗಳೂರು ಮತ್ತು ಬಲ್ದಾನ್‌ಗಳಲ್ಲಿ ತಲಾ ಒಬ್ಬೊಬ್ಬರು ಸೋಂಕಿತರು ಬುಧವಾರ ಪತ್ತೆಯಾಗಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ