ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತು ಲಭ್ಯವಿರುವ ಏಕೈಕ ದಾಖಲೆಯನ್ನು ಬಹಿರಂಗಪಡಿಸಬೇಕು ಎಂಬ ಆರ್ಜಿಯನ್ನು ಪ್ರಧಾನ ಮಂತ್ರಿಯವರ ಕಚೇರಿಯು ತಳ್ಳಿಹಾಕಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಕಾಯ್ದೆಯ ಗೌಪ್ಯತೆ ನಿಬಂಧನೆಯನ್ನು ಪ್ರಧಾನ ಮಂತ್ರಿ ಕಚೇರಿಯು ಉದ್ದರಿಸಿದ್ದರೂ ನಿರಾಕರಣೆಗೆ ನಿಖರ ಕಾರಣ ನೀಡಿಲ್ಲ.
1966ರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಕುರಿತ ದಾಖಲೆ ನಿರಾಕರಣೆ ವಿಚಾರವೀಗ ಕೇಂದ್ರೀಯ ಮಾಹಿತಿ ಆಯೋಗದ ಮುಂದಿದ್ದು, ಗೌಪ್ಯತೆಯ ಕುರಿತು ವಿಚಾರವನ್ನು ಅದು ಇತ್ಯರ್ಥಗೊಳಿಸಲಿದೆ.
ಶಾಸ್ತ್ರಿ ಸಾವಿಗೆ ಸಂಬಂಧಿಸಿದ ಒಂದು ದಾಖಲೆ ಇದೆ ಎಂದು ಈ ಹಿಂದೆ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಒಪ್ಪಿಕೊಂಡಿದ್ದರು, ಮತ್ತು ಗೌಪ್ಯತೆಯ ಹಿನ್ನೆಲೆಯಲ್ಲಿ ಇದನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಹೇಳಿದ್ದರು.
ಸಿಐಎ'ಸ್ ಐ ಆನ್ ಸೌತ್ ಏಶ್ಯಾ ಎಂಬ ಪುಸ್ತಕದ ಲೇಖಕರಾಗಿರುವ ಅಂಜು ಧಾರ್ ಎಂಬವರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.