ತಮಿಳ್ನಾಡಿನ ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಉಪಚುನಾವಣೆ ನಡೆದ ಎಲ್ಲಾ ಐದು ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ. ಇಲ್ಲಿ ಆಗಸ್ಟ್ 18ರಂದು ಚುನಾವಣೆ ನಡೆದಿತ್ತು.
ಬರ್ಗೂರ್, ಕಂಬಂ ಮತ್ತು ಇಲ್ಲಯಂಗುಡಿಯಲ್ಲಿ ಡಿಎಂಕೆ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ತೊಂಡಮುತ್ತೂರ್ ಮತ್ತು ಶ್ರೀವೈಕುಂಟಮ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಎಲ್ಲಾ ಐದೂ ಕ್ಷೇತ್ರಗಳಲ್ಲೂ ಚಿತ್ರನಟ ವಿಜಯಕಾಂತ್ ಅವರ ಡಿಎಂಡಿಕೆಯು ದ್ವಿತೀಯ ಸ್ಥಾನದಲ್ಲಿದೆ.
ರಾಜ್ಯದ ಪ್ರಮುಖ ವಿರೋಧಪಕ್ಷವಾಗಿರುವ ಎಐಎಡಿಎಂಕೆ ಹಾಗೂ ಪಿಎಂಕೆ ಮೈತ್ರಿಕೂಟವು ಚುನಾವಣೆಯನ್ನು ಬಹಿಷ್ಕರಿಸಿದೆ. ರಾಜ್ಯದಲ್ಲಿ ನ್ಯಾಯಸಮ್ಮತವಾದ ಚುನಾವಣೆ ನಡೆಯುವುದಿಲ್ಲ ಎಂದು ದೂರಿರುವ ಮೈತ್ರಿಕೂಟವು ಚುನಾವಣೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿದೆ.