ನೆಹರೂ ಒತ್ತಡಕ್ಕೆ ಪಟೇಲ್ ಆರೆಸ್ಸೆಸ್ ನಿಷೇಧಿಸಿದ್ದರು: ಆಡ್ವಾಣಿ
ನವದೆಹಲಿ, ಶುಕ್ರವಾರ, 21 ಆಗಸ್ಟ್ 2009( 17:24 IST )
ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರು ಜವಾಹರ್‌ಲಾಲ್ ನೆಹರೂ ಒತ್ತಾಯಕ್ಕೆ ಮಣಿದು ಆರೆಸ್ಸೆಸ್ಸನ್ನು ನಿಷಧಿಸಿದ್ದರು ಎಂಬುದಾಗಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ. ಪಟೇಲ್ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಮತ್ತು ಅವರು ಹೇಗೆ ಬಿಜೆಪಿಯ ಸಿದ್ಧಾಂತಕ್ಕೆ ಪ್ರಮುಖರು ಹೇಗಾಗುತ್ತಾರೆ ಎಂಬುದಾಗಿ ಜಸ್ವಂತ್ ಸಿಂಗ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಡ್ವಾಣಿ ಈ ಪ್ರತಿಕ್ರಿಯೆ ನೀಡಿದ್ದಾರೆ.
"ಒಂದು ತಿಂಗಳ ಬಳಿಕ ಪಟೇಲ್ ನೆಹರೂ ಅವರಿಗೆ ಪತ್ರವೊಂದನ್ನು ಬರೆದಿದ್ದು, ಆರೆಸ್ಸೆಸ್ ವಿರುದ್ಧ ತಿಲಮಾತ್ರದ ಸಾಕ್ಷಿಯೂ ಇಲ್ಲ ಎಂದು ಹೇಳಿದ್ದರು. ಜಸ್ವಂತ್ ಅವರು ಏನು ಸಂಭವಿಸಿತ್ತೋ ಅದರ ಅರ್ಧವನ್ನು ಮಾತ್ರ ಹೇಳುತ್ತಾರೆಯೇ ವಿನಹ ಮತ್ತರ್ಧ ಏನು ಎಂದು ಹೇಳಿಲ್ಲ" ಎಂಬುದಾಗಿ ಆಡ್ವಾಣಿ ಅವರನ್ನು ಉದ್ದೇಶಿಸಿ ಸುಶ್ಮಾ ಸ್ವರಾಜ್ ಹೇಳಿದ್ದಾರೆ.
"ಸುಮಾರು 700ಕ್ಕೂ ಅಧಿಕ ಅರಸೊತ್ತಿಗೆಯ ರಾಜ್ಯಗಳನ್ನು ಒಗ್ಗೂಡಿಸಿದ ಅವರ ಶ್ರಮವು ಶ್ರೇಷ್ಠವಾದ ಮಾನವೀಯ ಶ್ರಮವಾಗಿದ್ದು ಇದೊಂದು ಶ್ರೇಷ್ಠ ಸಾಧನೆ. ಇದು ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಸಾಧ್ಯವಾಗುವಂತದ್ದಲ್ಲ. ಆದರೆ ಜಸ್ವಂತ್ ಸಿಂಗ್ ಸರ್ದಾರ್ ಪಟೇಲರ ಹೆಸರು ಕೆಡಿಸಲು ಯತ್ನಿಸಿದ್ದಾರೆ" ಎಂದೂ ಆಡ್ವಾಣಿ ಹೇಳಿದ್ದಾರೆ.
"ಜಸ್ವಂತ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ನೋವಿನ ವಿಚಾರ, ಆದರೆ ಅದು ಅನಿವಾರ್ಯವಾಗಿತ್ತು. 30 ವರ್ಷಗಳಿಗಿಂತಲೂ ಜತೆಗಿದ್ದವರನ್ನು ಉಚ್ಚಾಟಿಸುವುದು ಮಾನಸಿಕವಾಗಿ ನೋವು ನೀಡುವ ವಿಚಾರ. ಆದರೆ, ಅವರು ಏನು ಬರೆದಿದ್ದಾರೋ ಅದು ಪಕ್ಷದ ಮೂಲ ಸಿದ್ಧಾಂತಕ್ಕೆ ವಿರೋಧವಾದುದು" ಎಂಬುದಾಗಿ ಆಡ್ವಾಣಿ ಅವರು ಶಿಮ್ಲಾದಲ್ಲಿ ನಡೆದ ಚಿಂತನ ಬೈಠಕ್‌ನ ಸಮಾರೋಪ ಭಾಷಣ ಮಾಡುತ್ತಾ ಹೇಳಿದ್ದಾರೆ.