ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರಪತಿಗಳ ಅಂಗರಕ್ಷಕರಿಬ್ಬರಿಗೆ ಜೀವಾವಧಿ ಶಿಕ್ಷೆ (Life term | president's guards | rape case)
 
2003ರ ಬುದ್ಧ ಜಯಂತಿ ಉದ್ಯಾನವನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಅಂಗರಕ್ಷಕರಿಬ್ಬರಿಗೆ ದೆಹಲಿ ನ್ಯಾಯಾಲಯ ಒಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ದೋಷಿಗಳೆಂದು ತೀರ್ಮಾನವಾಗಿದ್ದ ಹರ್ಪ್ರೀತ್ ಸಿಂಗ್ ಮತ್ತು ಸತೇಂದರ್ ಸಿಂಗ್ ಎಂಬಿಬ್ಬರಿಗೆ ದೆಹಲಿ ವಿಶ್ವವಿದ್ಯಾನಿಲಯದ 17ರ ಹರೆಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಿಬ್ಬರಿಗೆ ಸಹಕಾರ ನೀಡಿರುವ ಕುಲ್‌ದೀಪ್ ಸಿಂಗ್ ಮತ್ತು ಮನೀಶ್ ಕುಮಾರ್ ಎಂಬಿಬ್ಬರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಈ ನಾಲ್ವರ ವಿರುದ್ಧ ದರೋಡೆ, ಅಪಹರಣ, ಅತ್ಯಾಚಾರ ಆರೋಪ ಹೊರಿಸಲಾಗಿತ್ತು. ಬಲಿಪಶು ಹುಡುಗಿ ತನ್ನ ಗೆಳೆಯನೊಂದಿಗೆ ರಾಷ್ಟ್ರಪತಿ ಭವನದ ಸಮೀಪದಲ್ಲಿರುವ ಉದ್ಯಾನವನಕ್ಕೆ 2003ರ ಅಕ್ಟೋಬರ್ ಆರರಂದು ವಿಹಾರಕ್ಕೆ ತೆರಳಿದ್ದ ವೇಳೆ ಹರ್‌ಪ್ರೀತ್ ಹಾಗೂ ಸತೇಂದರ್ ಅವರುಗಳು ಅತ್ಯಾಚಾರ ಎಸಗಿದ್ದರೆ, ಇವರ ಈ ದುಷ್ಕೃತ್ಯವನ್ನು ಕುಲ್‌ದೀಪ್ ಕಾವಲು ಕಾದಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ನ್ಯಾಯಾಲಯವು 25 ಸಾಕ್ಷಿಗಳ ವಿಚಾರಣೆ ನಡೆಸಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ