ಮೋದಿ ಮೇಲೆ ಕ್ರಮಕೈಗೊಳ್ಳದಂತೆ ಆಡ್ವಾಣಿ ಅಟಲ್‌ರನ್ನು ತಡೆದಿದ್ದರು
ನವದೆಹಲಿ, ಶನಿವಾರ, 22 ಆಗಸ್ಟ್ 2009( 21:14 IST )
ಬಿಜೆಪಿ ನಾಯಕ ಆಜ್ವಾಣಿ ಮೇಲೆ ತನ್ನ ವಾಕ್‌ಪ್ರಹಾರವನ್ನು ಮುಂದುವರಿಸಿರುವ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರು "ಗೋದ್ರಾ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ವಿರುದ್ಧ ಕ್ರಮಕೈಗೊಳ್ಳದಂತೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಡ್ವಾಣಿ ತಡೆದಿದ್ದರು" ಎಂಬುದಾಗಿ ಹೇಳಿದ್ದಾರೆ.
ಇದರಿಂದ ವ್ಯಾಕುಲಗೊಂಡಿದ್ದ ಆಗಿನ ಪ್ರಧಾನಿ ವಾಜಪೇಯಿ ಅವರು ತನ್ನ ಸಂಸದೀಯ ಕಚೇರಿಯಲ್ಲಿ ರಾಜೀನಾಮೆ ಪತ್ರ ಬರೆದಿಟ್ಟಿದ್ದರು. ಆ ವೇಳೆ ಸಂಸತ್ ಅಧಿವೇಶನ ನಡೆಯುತ್ತಿತ್ತು ಎಂಬುದಾಗಿಯೂ ಅವರು ತಿಳಿಸಿದ್ದಾರೆ.
"ವಾಜಪೇಯಿ ಅವರು ಕಾಗದ ಒಂದನ್ನು ತೆಗೆದು ತನ್ನ ಕೈಯಾರೆ ರಾಜೀನಾಮೆ ಪತ್ರ ಬರೆಯಲು ಆರಂಭಿಸಿದ್ದರು. ನಾನು ಅವರ ಕೈ ಹಿಡಿದೆ. ಅವರು ನನ್ನ ಮುಖವನ್ನೇ ನೋಡಿದರು. ನೀವೇನು ಮಾಡುತ್ತೀರಿ, ದಯವಿಟ್ಟು ಹೀಗೆ ಮಾಡಬೇಡಿ ಎಂದು ನಾನು ಅವರಿಗೆ ಹೇಳಿದ್ದೆ" ಎಂದು ಅವರು ಎನ್‌ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.