ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಟಲ್ ಭೇಟಿಯಾಗಿ ಕುತೂಹಲ ಕೆರಳಿಸಿದ ಜಸ್ವಂತ್ ಸಿಂಗ್ (Atal Bihari Vajapayee | Jaswanth Singh | BJP | LK Advani)
 
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಉಚ್ಛಾಟಿತ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಭಾನುವಾರ ಭೇಟಿ ಮಾಡಿದ್ದು, ಹಲವು ಕುತೂಹಲಗಳಿಗೆ ಕಾರಣರಾಗಿದ್ದಾರೆ.

ಬಿಜೆಪಿಯ ಹಿರಿಯ ನಾಯಕರನ್ನು ಕೃಷ್ಣ ಮನೆನ್ ಮಾರ್ಗ್‌ನಲ್ಲಿನ ಅವರ ನಿವಾಸದಲ್ಲಿ ಭಾನುವಾರ ಅಪರಾಹ್ನ ವಾಜಪೇಯಿಯವರ ಸರಕಾರದಲ್ಲಿ ಸಂಪುಟ ಸಚಿವರಾಗಿದ್ದ ಸಿಂಗ್ ಭೇಟಿಯಾದರು.

ಮಾತುಕತೆಯ ನಂತರ ಪ್ರತಿಕ್ರಿಯಿಸಿರುವ ಜಸ್ವಂತ್, ನಾನು ವಾಜಪೇಯಿಜೀಯವರಿಗೆ ಗಣೇಶ ಚತುರ್ಥಿ ಪ್ರಯುಕ್ತ ಶುಭ ಹಾರೈಸಲು ಬಂದಿದ್ದೆ ಎಂದಷ್ಟೇ ತಿಳಿಸಿದ್ದಾರೆ.

ಜಸ್ವಂತ್ ಸಿಂಗ್‌ ತನ್ನ ಪುಸ್ತಕ 'ಜಿನ್ನಾ-ಭಾರ, ವಿಭಜನೆ, ಸ್ವಾತಂತ್ರ್ಯ'ದಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಹೊಗಳಿ, ಸರ್ದಾರ್ ವಲ್ಲಭಾಭಾಯ್ ಪಟೇಲ್‌ರನ್ನು ಟೀಕಿಸಿದ ನಂತರ ಪಕ್ಷವು ಅವರನ್ನು ಕಳೆದ ವಾರ ಉಚ್ಛಾಟಿಸಿತ್ತು.

ಪಕ್ಷದಿಂದ ಹೊರ ಬಂದ ನಂತರ ಅವರು ಯಾವುದೇ ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗಿರಲಿಲ್ಲ. ಈಗ ಒಮ್ಮಿಂದೊಮ್ಮೆಗೆ ವಾಜಪೇಯಿಯವರನ್ನೇ ಮುಖಾಮುಖಿಯಾಗುವ ಮೂಲಕ ಆಸಕ್ತಿ ಹುಟ್ಟಿಸಿದ್ದಾರೆ.

ಶನಿವಾರವಷ್ಟೇ ಜಸ್ವಂತ್ ತನ್ನ ಮಾಜಿ ಸಂಪುಟ ಸಹದ್ಯೋಗಿ ಜೆಡಿಯು ಮುಖಂಡ ಜಾರ್ಜ್ ಫೆರ್ನಾಂಡಿಸ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮುಖಭಂಗ ಅನುಭವಿಸಿದ ನಂತರ ಇದರ ಕುರಿತು ಚರ್ಚೆ ನಡೆಯಬೇಕೆಂದು ಆಗಾಗ ಬೇಡಿಕೆಯಿಟ್ಟು, ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷ ದಾಳಿಗಳನ್ನು ಕೂಡ ಜಸ್ವಂತ್ ಸಿಂಗ್ ನಡೆಸಿದ್ದರು. ಈ ಅತೃಪ್ತಿಯನ್ನು ಜಿನ್ನಾ ಹೊಗಳಿಕೆ ಕಾರಣವನ್ನು ಬಳಸಿಕೊಂಡು ನಾಯಕರು ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ