ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಸ್ತಿಬಹಿರಂಗ: ಜಡ್ಜ್ ಹೇಳಿಕೆ ಪ್ರಚಾರದ ಸ್ಟಂಟ್- ಸಿಜೆ (CJI | judge | Publicity | Shylendra Kumar)
 
ನ್ಯಾಯಾಧೀಶರ ಆಸ್ತಿ ಬಹಿರಂಗ ಕುರಿತು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಡಿ.ವಿ. ಶೈಲೇಂದ್ರ ಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೇವಲ 'ಪ್ರಚಾರದ ಹುಚ್ಚು' ಎಂಬುದಾಗಿ ಭಾರತದ ಮುಖ್ಯನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಹೇಳಿದ್ದಾರೆ.

ಶೈಲೇಂದ್ರ ಕುಮಾರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ಉಚ್ಚ ನ್ಯಾಯಾಲಯಗಳ ಎಲ್ಲಾ ನ್ಯಾಯಾಧೀಶರ ಪರವಾಗಿ ಮಾತನಾಡುವ ಮುಖ್ಯ ನ್ಯಾಯಾಧೀಶರ ಅಧಿಕಾರವನ್ನು ಪ್ರಶ್ನಿಸಿದ್ದರು.

ನ್ಯಾಯಾಧೀಶರು ತಮ್ಮ ಆಸ್ತಿ ಬಹಿರಂಗ ಪಡಿಸುವ ಕುರಿತು ತನ್ನ ವಿರೋಧವಿಲ್ಲ ಎಂಬುದಾಗಿ ಮುಖ್ಯನ್ಯಾಯಾಧೀಶ ಬಾಲಕೃಷ್ಣನ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಆದರೆ, ನ್ಯಾಯಾಂಗದ ಮುಖ್ಯಸ್ಥನ ಸ್ಥಾನದಲ್ಲಿರುವ ತನಗೆ ಎಲ್ಲಾ ನ್ಯಾಯಾಧೀಶರ ಪರವಾಗಿ ಮಾತನಾಡುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಇದು ಇತರ ದೇಶಗಳ ನ್ಯಾಯಾಂಗ ವ್ಯವಸ್ಥೆಯಲ್ಲೂ ಪ್ರಚಲಿತದಲ್ಲಿರುವ ಪದ್ಧತಿಯಾಗಿದೆ ಎಂದು ಅವರು ಹೇಳಿದ್ದಾರೆ.

"ನ್ಯಾಯಾಂಗದಲ್ಲಿ ಏನುನಡೆಯುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇದೆ. ಮತ್ತು ನ್ಯಾಯಾಧೀಶರ ಆಸ್ತಿ ಬಹಿರಂಗ ಕುರಿತು ತಾನು ವ್ಯಕ್ತಪಡಿಸಿರುವ ನಿಲುವಿಗೆ ತಾನು ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ. ನ್ಯಾಯಾಧೀಶರು ಆಸ್ತಿಬಹಿರಂಗ ಪಡಿಸಬೇಕು ಎಂಬ ಇಚ್ಛೆ ಹೊಂದಿದ್ದರೆ ಅವರನ್ನು ಯಾರೂ ತಡೆಯಲಾರರು. ನಾನು ಹೇಗೆ ತಡೆಯಲು ಸಾಧ್ಯ. ಕಾನೂನು ಅಸ್ತಿತ್ವಕ್ಕೆ ಬಂದರೆ ಎಲ್ಲರೂ ಆಸ್ತಿಬಹಿರಂಗಪಡಿಸಲೇ ಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ