ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ಪ್ರಧಾನಿ ವಾಜಪೇಯಿ ಆಶೀರ್ವಾದವಿದೆ : ಜಸ್ವಂತ್ (Jaswant Singh | Atal Bihari Vajpayee | BJP leader | Ganesh Chaturthi)
ಬಿಜೆಪಿಯಿಂದ ಉಚ್ಚಾಟಿತರಾದ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ,ಮಾಜಿ ಪ್ರಧಾನಿ ವಾಜಪೇಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಕ್ಷದಿಂದ ಉಚ್ಚಾಟಿತರಾದ ನಂತರ ಬಿಜೆಪಿ ನಾಯಕನನ್ನು ಭೇಟಿ ಮಾಡಿರುವುದು ಪ್ರಥಮ ಬಾರಿಯಾಗಿದೆ.
ಟೆಲಿವಿಜನ್ ಚಾನೆಲ್‌ಗಳಲ್ಲಿ ತಮ್ಮ ಉಚ್ಚಾಟನೆಯ ಕುರಿತಂತೆ ವರದಿಯಾದ ಕಾರ್ಯಕ್ರಮಗಳನ್ನು ವೀಕ್ಷಿಸಿದ ನಂತರ , ಗಣೇಶ ಚತುರ್ಥಿಯ ಶುಭಾಶಯಗಳನ್ನು ತಿಳಿಸಿ ಆಶೀರ್ವಾದ ಪಡೆಯಲು ವಾಜಪೇಯಿ ನಿವಾಸಕ್ಕೆ ತೆರಳಿದ್ದೆ. ನನಗೆ ಅವರು ಆಶೀರ್ವದಿಸಿದ್ದಾರೆ ಎಂದು ವಾಜಪೇಯಿ ಅವರೊಂದಿಗೆ 35 ನಿಮಿಷಗಳ ಮಾತುಕತೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಮ್ಲಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಸ್ವಂತ್ ಸಿಂಗ್ , ನಾನು ವಾಜಪೇಯಿ ಅವರ ಹುನುಮಂತನಾಗಿದ್ದೆ ಪ್ರಸ್ತುತ ಬಿಜಿಪಿಗೆ ನಾನು ರಾವಣನಾಗಿ ಕಾಣಿಸಿಕೊಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಾಜಪೇಯಿ ಅಸಮಧಾನಗೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ವಾಜಪೇಯಿಯವರ ಆತ್ಮಿಯ ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿ ವಾಜಪೇಯಿ ಮತ್ತು ಜಸ್ವಂತ್ ಸಿಂಗ್ ಅವರ ಭೇಟಿಯ ಕುರಿತಂತೆ ಲಕ್ನೋ ಸಂಸದ ಲಾಲ್‌ಜೀ ಟಂಡನ್ ಅವರಿಗೆ ಕೇಳಿದಾಗ, ಯಾರು ಬೇಕಾದರೂ ವಾಜಪೇಯಿ ಅವರನ್ನು ಭೇಟಿ ಮಾಡಬಹುದು ಎಂದು ಹೇಳಿದ್ದಾರೆ.
ಟೆಲಿವಿಜನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಸ್ವಂತ್ , ಜಿನ್ನಾ ಹಾಗೂ ಪಟೇಲ್ ಅವರ ಬಗ್ಗೆ ಬಿಜಿಪಿ ಸಂಕುಚಿತ ಮನೋಭಾವವನ್ನು ಹೊಂದಿದೆ. ಆದರೆ ಈ ಮಟ್ಟಕ್ಕೆ ಸಂಕುಚಿತ ಮನೋಭಾವ ತೋರಲಿರುವುದಾಗಿ ಭಾವಿಸಿರಲಿಲ್ಲವೆಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.