ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾರ್ಜ್‌ಗೆ ಕ್ಲೀನ್‌ಚಿಟ್: ಕಾಂಗ್ರೆಸ್ ಕ್ಷಮೆ ಕೋರಲು ಒತ್ತಾಯ (George Fernandes | Congress | CBI chargesheet | Apology | casket)
ಜಾರ್ಜ್‌ಗೆ ಕ್ಲೀನ್‌ಚಿಟ್: ಕಾಂಗ್ರೆಸ್ ಕ್ಷಮೆ ಕೋರಲು ಒತ್ತಾಯ
ನವದೆಹಲಿ, ಸೋಮವಾರ, 24 ಆಗಸ್ಟ್ 2009( 15:28 IST )
PTI
ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದ ಶವಪೆಟ್ಟಿಗೆ ಹಗರಣದಲ್ಲಿ ತಮ್ಮ ಹೆಸರನ್ನು ಸಿಬಿಐ ದಾಖಲಿಸದ ಹಿನ್ನೆಲೆಯಲ್ಲಿ, ತಾವು ಭಾಗಿಯಾಗಿರುವುದಾಗಿ ಆರೋಪಿಸಿದ್ದ ಕಾಂಗ್ರೆಸ್ ಪಕ್ಷ ಕ್ಷಮೆ ಕೋರಬೇಕು ಎಂದು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಒತ್ತಾಯಿಸಿದ್ದಾರೆ.
ನಾನು ರಕ್ಷಣಾ ಸಚಿವನಾಗಿದ್ದಾಗ, ಅಲುಮಿನಿಯಂ ಪೆಟ್ಟಿಗೆ ಖರೀದಿ ವಿಷಯ ನನ್ನ ಟೇಬಲ್ ಬಳಿ ಬರಲಿಲ್ಲ. ಆದರೆ ಕಾಂಗ್ರೆಸ್ ಶವಪೆಟ್ಟಿಗೆ ಖರೀದಿಯಲ್ಲಿ ನನ್ನ ಪಾತ್ರವಿದೆ ಎಂದು ಆರೋಪಿಸಿತು ಎಂದು ಜೆಡಿ (ಯು) ನಾಯಕ ಜಾರ್ಜ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾರ್ಗಿಲ್ ಹುತಾತ್ಮರ ಶವಗಳನ್ನು ಸಾಗಿಸಲು ಅಮೆರಿಕದಿಂದ ಖರೀದಿಸಿದ ಶವಪೆಟ್ಟಿಗೆಗಳನ್ನು ಹೆಚ್ಚಿನ ಹಣ ಪಾವತಿಸಿ ಖರೀದಿಸಲಾಗಿದೆ . ಹಗರಣದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಭಾಗಿಯಾಗಿರಬಹುದು ಎನ್ನುವ ಶಂಕೆಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ, ಅಗಸ್ಟ್ 19 ರಂದು ಇಬ್ಬರು ನಿವೃತ್ತ ಸೇನಾಧಿಕಾರಿಗಳು ಮತ್ತೊಬ್ಬ ಹಾಲಿ ಅಧಿಕಾರಿ ಸೇರಿದಂತೆ ನಾಲ್ಕು ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕೈಬಿಡಲಾಗಿದೆ.
ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳ ರಾಜಕೀಯ ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ನೈತಿಕತೆಯನ್ನು ಕಳೆದುಕೊಂಡಿದ್ದು, ಕೂಡಲೇ ತಮ್ಮ ಕ್ಷಮೆ ಕೋರಬೇಕು ಎಂದು ಜಾರ್ಜ್ ಒತ್ತಾಯಿಸಿದ್ದಾರೆ.