ಸ್ವಿಸ್ ಬ್ಯಾಂಕ್ ತನ್ನ ಭಾರತೀಯ ಗ್ರಾಹಕರ ವಿವರವನ್ನು ನೀಡಲು ನಿರಾಕರಿಸಿರುವ ಕುರಿತು ಭಾರತ ಸರ್ಕಾರ ಪರಿಗಣಿಸಲಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಉತ್ತರ ಬ್ಲಾಕ್‌ನಲ್ಲಿರುವ ತನ್ನ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಕುರಿತು ಬ್ಯಾಂಕಿಂಗ್ ವಲಯದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಗ್ರಾಹಕರ ರಹಸ್ಯ ಖಾತೆಯ ವಿವರ ನೀಡಲು ನಿರಾಕರಿಸಿತ್ತು. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಮಾದರಿ ತೆರಿಗೆ ಒಪ್ಪಂದ ಸಂಸ್ಥೆಯು ವಿವರಗಳನ್ನು ನೀಡಲು ಅನುಮತಿ ನೀಡುತ್ತಿಲ್ಲ ಎಂದು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
"ಭಾರತವು ಸುಮ್ಮನೆ ಟೆಲಿಫೋನ್ ಪುಸ್ತಕವನ್ನು ಎಸೆದು ಇವರಲ್ಲಿ ಯಾರಾದರೂ ನಿಮ್ಮಲ್ಲಿ ಖಾತೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದರೆ" ಅದನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಸ್ವಿಸ್ ಬ್ಯಾಕ್ ಸಂಘಟನೆಯ ಅಧಿಕಾರಿ ಹೇಳಿದ್ದರು.