ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ..! (Rahul Gandhi | Fake driving licence | Saran | Bihar | Puneeta Srivastava)
ರಾಹುಲ್ ಗಾಂಧಿ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ..!
ಪಟ್ನಾ, ಸೋಮವಾರ, 24 ಆಗಸ್ಟ್ 2009( 15:52 IST )
PTI
ಬಿಹಾರ್‌ನ ಸರಣ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿದ್ದು, ರಾಹುಲ್ ಗಾಂಧಿ ವಿಳಾಸದ ಬದಲಿಗೆ ಸರಣ್ ಜಿಲ್ಲಾ ನ್ಯಾಯಾಧೀಶರ ನಿವಾಸದ ವಿಳಾಸ ನಮೂದಿಸಲಾಗಿದೆ.
ನಕಲಿ ಡ್ರೈವಿಂಗ್ ಲೈಸೆನ್ಸ್ ವಿತರಿಸಿ ಒಂದು ವಾರ ಕಳೆದಿದ್ದರೂ ಜಿಲ್ಲಾಡಳಿತದ ಬಳಿ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ಮೂಲಗಳು ತಿಳಿಸಿವೆ.
ಸರಣ್ ಜಿಲ್ಲೆಯ ಸಾರಿಗೆ ಅಧಿಕಾರಿಯಾದ ಪುನೀತಾ ಶ್ರೀವಾತ್ಸವ್ ,ರಾಹುಲ್ ಗಾಂಧಿ ಹೆಸರಿನಲ್ಲಿ (1847/09) ಡ್ರೈವಿಂಗ್ ಲೈ,ಸೆನ್ಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೈವಿಂಗ್ ಲೈಸೆನ್ಸ್ 2009 ಮೇ 18 ರಿಂದ 2022 ಮೇ 22ರ ವರೆಗೆ ಸಿಂಧುವಾಗಿದೆ. ಚಾಲನಾ ಪತ್ರದಲ್ಲಿ ರಾಹುಲ್ ತಂದೆ ರಾಜೀವ್ ಗಾಂಧಿ ಎಂದು ಹೆಸರಿಸಲಾಗಿದ್ದು, ಖಾಯಾಂ ವಿಳಾಸದಲ್ಲಿ ಸಂಸದ್ ಭವನ್ ಮಾರ್ಗ್ ನವದೆಹಲಿ ಎಂದು ಮುದ್ರಿಸಲಾಗಿದೆ.
ರಾಹುಲ್ ಗಾಂಧಿ ಹೆಸರಿನಲ್ಲಿ ನೀಡಲಾದ ಡ್ರೈವಿಂಗ್ ಲೈಸೆನ್ಸ್‌ನಲ್ಲಿ, ಸರಣ್ ಜಿಲ್ಲಾ ಸಾರಿಗೆ ಅಧಿಕಾರಿಯಾದ ಪುನೀತಾ ಶ್ರೀವಾಸ್ತವ್ ಹಸ್ತಾಕ್ಷರ ಹಾಗೂ ಕಚೇರಿಯ ಸೀಲ್ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಚಾಲನಾ ಪರವಾನಿಗಿ ಪತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾವಚಿತ್ರವಿಲ್ಲ. ಆದರ ಬದಲಿಗೆ ಅಪರಿಚಿತ ಯುವಕನ ಭಾವಚಿತ್ರವಿದೆ. ಆದರೆ ಜಿಲ್ಲಾ ಸಾರಿಗೆ ಅಧಿಕಾರಿಯಾದ ಶ್ರೀವಾಸ್ತವ್, ಅಂತಹ ಯಾವುದೇ ಡ್ರೈವಿಂಗ್ ಲೈಸೆನ್ಸ್ ವಿತರಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಇದೊಂದು ನನ್ನ ನಕಲಿ ಹಸ್ತಾಕ್ಷರ ನಕಲಿ ಸೀಲ್ ಹೊಂದಿದ ನಕಲಿ ಡ್ರೈವಿಂಗ್ ಲೈಸೆನ್ಸ್. ಈ ಹಿಂದೆ ಕೂಡಾ ನನ್ನ ತೇಜೋವಧೆ ಮಾಡಲು ಇಂತಹ ಹಲವಾರು ನಕಲಿ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ವಿತರಿಸಿರುವುದು ಬಿಹಾರ್‌ನಲ್ಲಿ ಇದು ಮೊದಲು ಬಾರಿಯಲ್ಲ .1990ರಲ್ಲಿ ಎಲ್‌ಟಿಟಿಇ ನಾಯಕ ವಿ.ಪ್ರಭಾಕರನ್ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ವಿತರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.