ಇಲ್ಲಿನ ರೈಲ್ವೇನಿಲ್ದಾಣದಲ್ಲಿ ಶಂಕಿತ ಉಗ್ರನೊಬ್ಬ ಗುಂಡುಹಾರಾಟ ನಡೆಸಿದ್ದು, ಈ ವೇಳೆ ತಳ್ಳುಗಾಡಿ ವ್ಯಾಪಾರಿಯೊಬ್ಬ ಮೃತನಾಗಿದ್ದು ಜಿಆರ್ಪಿ ಮುಖ್ಯಪೇದೆಗಳಿಬ್ಬರು ಗಾಯಗೊಂಡಿದ್ದಾರೆ. ಉಗ್ರನ ಬ್ಯಾಗನ್ನು ತಪಾಸಿಸಲು ಮುಂದಾದಾಗ ಉಗ್ರ ಗುಂಡು ಹಾರಿಸಿದ್ದಾನೆ.
ನಾರ್ಕೋಟಿಕ್ ಸೆಲ್ನ ಪೊಲೀಸರು ಆತನ ಬ್ಯಾಗನ್ನು ಪರೀಕ್ಷಿಸಲು ಮುಂದಾದಾಗ ಆತ ಈ ದುಷ್ಕೃತ್ಯ ಎಸಗಿದ್ದಾನೆ. ಪುಣೆಯಿಂದ ಮಧ್ಯರಾತ್ರಿ 3.30ರ ವೇಳೆಗೆ ಬಂದ ಜಮ್ಮು ಮೂಲದ ಜೇಲಂ ಎಕ್ಸ್ಪ್ರೆಸ್ ರೈಲಿನಲ್ಲಿ ಈತ ಬಂದಿಳಿದಿದ್ದ. ರೈಲ್ವೇ ನಿಲ್ದಾಣದ ಫ್ಲಾಟ್ಫಾರಂ ಸಂಖ್ಯೆ 4ರಲ್ಲಿ ಈ ಘಟನೆ ಸಂಭವಿಸಿದೆ.
ಶಂಕಿತ ಉಗ್ರನನ್ನು ಬಲ್ಬೀರ್ ಸಿಂಗ್ ಭೂಟ್ನ ಎಂದು ಗುರುತಿಸಲಾಗಿದೆ. ಈತ ರೈಲಿನಿಂದ ಇಳಿದ ತಕ್ಷಣವೇ ಬೋಗಿಯ ಅಡಿಯಲ್ಲಿ ಅವಿತು ಕುಳಿತು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.
ಸುಮಾರು ಒಂದು ಗಂಟೆಗಳ ಕಾಲದ ಗುಂಡಿನ ಚಕಮಕಿಯ ಬಳಿಕ ಬಲ್ಬೀರ್ನನ್ನು ಬಂಧಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಬೇಕಾದವನಾಗಿದ್ದು, ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಎಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.