ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಆಂತರಿಕ ವಿಷಯ, ನಾವು ತಲೆ ಹಾಕಲ್ಲ: ಆರೆಸ್ಸೆಸ್ (BJP | RSS | Ram Madhav | Mohan Bhagwat | Arun Shourie | Jaswanth Singh)
 
ಬಿಜೆಪಿಯೊಳಗಿನ ಗೊಂದಲಗಳು, ಹುಳುಕುಗಳು ಒಂದೊಂದಾಗಿ ಹೊರಬರುತ್ತಾ ಅದರೊಳಗಿನ ಸೈದ್ಧಾಂತಿಕ ಬಿಕ್ಕಟ್ಟು ಹೆಚ್ಚಿಸುತ್ತಿರುವಂತೆಯೇ, ಇದೆಲ್ಲಾ ಬಿಜೆಪಿಯ ಆಂತರಿಕ ವಿಷಯ, ಬೆಳವಣಿಗೆಗಳ ಬಗ್ಗೆ ಅದರ ನಾಯಕರೇ ವಿಮರ್ಶೆ ಮಾಡಿಕೊಳ್ಳಬೇಕು, ನಾವೇನೂ ತಲೆ ಹಾಕುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಪಷ್ಟಪಡಿಸಿದೆ.

ಬಿಜೆಪಿಯೊಳಗಿನ ಗೊಂದಲ ಸರಿಪಡಿಸುವುದು ಆರೆಸ್ಸೆಸ್ ಕೆಲಸ ಅಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಹೇಳಿದ್ದಾರೆ. ಬಿಜೆಪಿಯನ್ನು ಆರೆಸ್ಸೆಸ್ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್ ಶೌರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಬಿಜೆಪಿಗೆ ಆರೆಸ್ಸೆಸ್ "ಸಹಾಯ ಮತ್ತು ಸಲಹೆ" ಮಾತ್ರವೇ ನೀಡಬಹುದೇ ಹೊರತು ರಾಜಕೀಯ ಕೆಲಸ ಕಾರ್ಯಗಳನ್ನು ಅವರೇ ಮಾಡಿಕೊಳ್ಳಬೇಕು ಎಂದು ರಾಮ್ ಮಾಧವ್ ನುಡಿದರು.

ಬಿಜೆಪಿ ನಾಯಕತ್ವವು ಪರಿಸ್ಥಿತಿಯನ್ನು ನಿರ್ವಹಿಸಲು ಅಶಕ್ತವಾಗಿದೆ ಎಂಬ ಅರುಣ್ ಶೌರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲೇನು ನಡೆಯುತ್ತಿದ್ದರೂ, ಅದರ ಬಗ್ಗೆ ಯೋಚಿಸುವುದು, ಅದರ ಬಗ್ಗೆ ಪರಾಮರ್ಶಿಸುವುದು, ಸೂಕ್ತ ಕ್ರಮ ಕೈಗೊಳ್ಳುವುದು ಅವರಿಗೇ ಬಿಟ್ಟ ವಿಚಾರ, ನಮ್ಮದಲ್ಲ ಎಂದರು.

ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟಿನ ಬಗ್ಗೆ ಆರೆಸ್ಸೆಸ್ ಚಿಂತಿತವಾಗಿದೆಯೇ ಎಂದು ಕೇಳಿದಾಗ, ಆರೆಸ್ಸೆಸ್ ಅಭಿಪ್ರಾಯವನ್ನು ಈಗಾಗಲೇ ನಮ್ಮ ಮುಖ್ಯಸ್ಥ (ಮೋಹನ್ ಭಾಗವತ್) ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ನಾವೇನೂ ವಿಶೇಷ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ