ಎಸ್ಪಿಗೆ ಬನ್ನಿ, ಒಳ್ಳೆ ಸ್ಥಾನ ಕೊಡ್ತೇವೆ: ಜಸ್ವಂತ್‌ಗೆ ಅಮರ್
ನವದೆಹಲಿ, ಮಂಗಳವಾರ, 25 ಆಗಸ್ಟ್ 2009( 20:00 IST )
PTI
ಬಿಜೆಪಿಯ ಪ್ರಾಥಮಿಕ ಸ್ಥಾನದಿಂದಲೇ ಉಚ್ಚಾಟನೆಗೀಡಾಗಿರುವ ಹಿರಿಯ
PTI
ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಸಮಾಜವಾದಿ ಪಕ್ಷಕ್ಕೆ ಆಹ್ವಾನಿಸಿರುವ ಅಮರ್ ಸಿಂಗ್, ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡಿರುವ ತನ್ನ ಹೊಸ ಪುಸ್ತಕದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಜಸ್ವಂತ್‌ರನ್ನು ಉಚ್ಚಾಟಿಸಿದೆ.
ಕಾಂಧಹಾರ್ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ವಂತ್ ಸಿಂಗ್ ವಿರುದ್ಧ ಪದೇಪದೇ ದಾಳಿ ಮಾಡುತ್ತಿದ್ದೀರಲ್ಲ ಎಂಬ ಪ್ರಶ್ನೆಗೆ ಉತ್ತರಸಿದ ಅಮರ್ ಸಿಂಗ್ ಅವರು, ಜಸ್ವಂತ್ ಸಿಂಗ್ ಹೊರಗೆಡಹಿರುವ ಹೊಸವಿಚಾರಗಳು ಅವರ ಕುರಿತು ಪಕ್ಷದ ಅಭಿಪ್ರಾಯವನ್ನು ಬದಲಿಸಿದೆ ಎಂದು ಹೇಳಿದರು.
ಕಾಂಧಹಾರ್ ವಿಮಾನ ಅಪಹರಣದ ವೇಳೆ ಪ್ರಯಾಣಿಕರ ಬಿಡುಗಡೆಗಾಗಿ ಜೈಲಿನಲ್ಲಿದ್ದ ಉಗ್ರರ ಬಿಡುಗಡೆ ವಿಚಾರ ತನಗೆ ತಿಳಿದೇ ಇರಲಿಲ್ಲ ಎಂಬ ಆಡ್ವಾಣಿ ಹೇಳಿಕೆಯನ್ನು ಪ್ರಸ್ತಾಪಿಸಿರುವ ಜಸ್ವಂತ್, ತಾನು ಆಡ್ವಾಣಿಯವರನ್ನು ಸಮರ್ಥಿಸಿದ್ದೆ ಎಂದು ಹೇಳಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಎಸ್ಪಿ ನಾಯಕ, ಜಸ್ವಂತ್ ಸಿಂಗ್ ಅವರಿಗೆ ಈಗಾಗಲೆ ಪಕ್ಷದಿಂದ ಆಹ್ವಾನ ನೀಡಲಾಗಿದೆ ಆದರೆ ಅವರು ತಮ್ಮ ಮುಂದಿನ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ ಎಂದು ತಿಳಿಸಿದ್ದಾರೆ. ಉಚ್ಚಾಟನೆಗೊಂಡ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಸ್ವಂತ್ ತನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದರು.