ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರದಿಂದ ದೊಡ್ಡಮೀನು ನುಣುಚಿಕೊಳ್ಳಬಾರದು: ಪಿಎಂ (Corruption | Big fish | punishment | Manmohan Singh)
 
PTI
'ಉನ್ನತಮಟ್ಟದ ಭ್ರಷ್ಟಾಚಾರ'ವನ್ನು ತಡೆಯಲು ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ಭ್ರಷ್ಟಾಚಾರ ನಿರೋಧ ಅಧಿಕಾರಿಗಳು ಆಕ್ರಮಣಕಾರಿಯಾಗಿ ಕಾರ್ಯಕೈಗೊಳಳಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

'ದೊಡ್ಡಮೀನು' ಶಿಕ್ಷೆಯಿಂದ ನುಣುಚಿಕೊಳ್ಳುತ್ತದೆ ಎಂಬ ಕಲ್ಪನೆಯನ್ನು ಬದಲಿಸಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದ ಪ್ರಧಾನಿ ಪ್ರತಿಯೊಬ್ಬರ ವಿರುದ್ಧ ಕ್ಷಿಪ್ರವಾಗಿ ಯಾವುದೇ ಭೀತಿರಹಿತರಾಗಿ ಕಾರ್ಯನಿರ್ವಹಿಸಬೇಕು ಎಂದು ನುಡಿದರು.

ಸಿಬಿಐ ಹಾಗೂ ಭ್ರಷ್ಟಾಚಾರ ವಿರೋಧಿ ದಳದ ಸಮ್ಮೇಳನವನ್ನು ಉದ್ಘಾಟಿಸುತ್ತಾ ಮಾತನಾಡಿದ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಯಾವುದೇ ಪರಿಹಾರವಿಲ್ಲ, ಅದರ ವಿರುದ್ಧ ವಿವಿಧ ಹಂತಗಳಲ್ಲಿ ಹೋರಾಡಬೇಕಿದೆ, ಆಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಕಡಿಮೆ ವಿವೇಚನಾಯುಕ್ತವಾಗಿಸುವುದು ಇದರಲ್ಲೊಂದು ಎಂದು ಅವರು ನುಡಿದರು.

"ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರಮಣಕಾರಿ ಕ್ರಮಕೈಗೊಳ್ಳಬೇಕು. ಸಣ್ಣಪುಟ್ಟ ಪ್ರಕರಣಗಳನ್ನು ತಕ್ಷಣವೇ ನಿಭಾಯಿಸಲಾಗುತ್ತದೆ ಆದರೆ, ದೊಡ್ಡಡೊಡ್ಡ ವ್ಯಕ್ತಿಗಳು ಶಿಕ್ಷೆಯಿಂದ ನುಣುಚಿಕೊಳ್ಳುತ್ತಾರೆ ಎಂಬ ಭಾವನೆ ಜನರಲ್ಲಿ ಮನೆಮಾಡಿದೆ" ಎಂದು ಪ್ರಧಾನಿ ನುಡಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕ್ಷಿಪ್ರ ತನಿಖೆಯು ಅತ್ಯಂತ ಪ್ರಮುಖವಾಗಿದೆ ಮತ್ತು ಅವಶ್ಯವಾಗಿದೆ ಎಂದು ಅವರು ನುಡಿದರು.

"ವಿಚಾರಣೆಗಳನ್ನು ತಕ್ಷಣವೇ ನಡೆಸಬೇಕು ಮತ್ತು ತೀರ್ಪುಗಳನ್ನು ಕ್ಷಿಪ್ರವಾಗಿ ನೀಡಬೇಕು" ಎಂದು ಅವರು ನುಡಿದರು. ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಮುಗಿಸುವ ಗುರಿ ಇರಬೇಕು. ಹೀಗಾದಾಗ ಮೂರು ವರ್ಷಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲು ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಿಸಿದರು.

ರಾಷ್ಟ್ರದಲ್ಲಿ 71 ಹೊಸ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ ಮತ್ತು ಅವುಗಳು ಮಾದರಿ ನ್ಯಾಯಾಲಯಗಳಾಗಿ ಕಾರ್ಯನಿರ್ವಹಿಸುವಂತೆ ನಿರೀಕ್ಷಿಸಲಾಗಿದ್ದು, ದಿನನಿತ್ಯ ಕಲಾಪಗಳನ್ನು ನಡೆಸಿ ಅನವಶ್ಯಕ ಮುಂಡೂಡಿಕೆಗಳನ್ನು ತಡೆಯಬೇಕೆಂದು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ವಿಶ್ವದ ಗೌರವವಿದೆ. ಆದರೆ, ನಮ್ಮ ರಾಷ್ಟ್ರದಲ್ಲಿರುವ ಲಂಚಾವತಾರವು ರಾಷ್ಟ್ರದ ಘನತೆಗೆ ಧಕ್ಕೆಯುಂಟಾಗಿದೆ. ಇದರಿಂದಾಗಿ, ನ್ಯಾಯೋಚಿತ ಹಾಗೂ ಪಾರದರ್ಶಕ ವ್ಯವಹಾರವನ್ನು ಎದುರುನೋಡುವ ಹೂಡಿಕೆದಾರರು ಹಿಂಜರಿಯುವಂತೆ ಮಾಡಿದೆ. ರಾಷ್ಟ್ರವು ಬೆಳೆಯುತ್ತಿರುವಂತೆ ಮತ್ತು ವಿಶ್ವದ ಆರ್ಥಿಕತೆಯೊಂದಿಗೆ ಏಕೀಕರಣಗೊಳ್ಳುವ ಸಂದರ್ಭದಲ್ಲಿ ಭ್ರಷ್ಟಾಚಾರವು ಒಂದು ಸಾಂಕ್ರಾಮಿಕವಾಗಿ ಮುಂದುವರಿಯುತ್ತಿದ್ದು ಶ್ರೇಷ್ಠ ತಂತ್ರಜ್ಞಾನ ಮತ್ತು ಸಂಪನ್ಮೂಲಗಳಿಗೆ ಅಡ್ಡಿಯಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ