ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್‌ನಿಂದ ಮಾಹಿತಿ ನಿರಾಕರಣೆ ದುರದೃಷ್ಟಕರ: ಎಸ್ಸೆಂಕೆ (Dossier | Pakistan | Hafiz Saeed | SM Krishna)
 
PTI
ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವು ಮತ್ತಷ್ಟು ಪುರಾವೆ ಕೇಳಿರುವುದನ್ನು 'ದುರದೃಷ್ಟಕರ' ಎಂದು ಹೇಳಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು, ಲಷ್ಕರ್-ಇ-ತೋಯ್ಬಾದ ಸ್ಥಾಪಕ ಹಫೀಜ್ ಸಯೀದ್ ವಿರುದ್ಧ ನೀಡಲಾಗಿರುವ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸಿಗೆ ಕ್ಷಿಪ್ರವಾಗಿ ಕಾರ್ಯಾಚರಿಸಬೇಕು ಎಂದು ಬುಧವಾರ ಒತ್ತಾಯಿಸಿದ್ದಾರೆ.

"ಇದು (ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟೀಸ್) ಭಾರತವು ಏನು ಹೇಳುತ್ತಿದೆ ಎಂಬುದನ್ನು ಸಮರ್ಥಿಸುತ್ತದೆ. ಮುಂಬೈ ದಾಳಿಯ ರೂವಾರಿಗಳನ್ನು ನ್ಯಾಯದ ಕಟಕಟೆಗೆ ತರಬೇಕಿದೆ. ಈ ವ್ಯಕ್ತಿಗಳು ದಾಳಿಯಲ್ಲಿ ಒಳಗೊಂಡಿದ್ದಾರೆ ಎಂಬುದರ ಪುರಾವೆಗಾಗಿ ನಾವು ಅತ್ಯಂತ ಜಾಗರೂಕತೆಯಿಂದ ಸಾಕ್ಷ್ಯಗಳನ್ನು ಕಲೆಹಾಕಿದ್ದೇವೆ" ಎಂಬುದಾಗಿ ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಪಾಕಿಸ್ತಾನಕ್ಕೆ ಸಲ್ಲಿಸಲಾಗಿರುವ ಪುರಾವೆಗಳನ್ನೊಳಗೊಂಡ ಆರನೆಯ ಮಾಹಿತಿ ಕಡತವನ್ನೂ ಪಾಕಿಸ್ತಾನ ನಿರಾಕರಿಸಿರುವುದ ದುರದೃಷ್ಟಕರ. ಆದರೆ, ಅದೇವೇಳೆಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್ ನೀಡಿದೆ. ವಿಶ್ವವು ಈ ಬೆಳವಣಿಗೆಗಳನ್ನು ಗಮನಿಸಿ ತಮ್ಮದೇ ಆದ ನಿರ್ಧಾರಕ್ಕೆ ಬರಬೇಕು" ಎಂಬುದಾಗಿ ಅವರು ನುಡಿದರು. ಪಾಕಿಸ್ತಾನವು ಯಾವುದಾದರೂ ಕ್ರಮವನ್ನು ಕೈಗೊಳ್ಳುವುದೇ ಅಥವಾ ಇಲ್ಲವೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಉಗ್ರವಾದಿ ಸಂಘಟನೆಗಳ ವಿರುದ್ಧ ಕಾರ್ಯಾಚರಿಸಲು ಭಾರತವು ಪಾಕಿಸ್ತಾನದ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸಲಿದೆ ಎಂದು ಅವರು ನುಡಿದರು.

ಮುಂಬೈ ದಾಳಿ ಅಥವಾ ಸಂಜೋತಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಭಾರತವು ಯಾವುದೇ ಸ್ಪಷ್ಟವಾದ ಸಾಕ್ಷ್ಯಗಳನ್ನು ನೀಡಿಲ್ಲ. ಹಾಗಾಗಿ ಭಾರತದಲ್ಲಿ ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದನಾ ದಾಳಿಗಳಿಗೆ ಇಸ್ಲಮಾಮಾದ್ ಹೊಣೆಯಲ್ಲ ಎಂಬುದಾಗಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಮಂಗಳವಾರ ಹೇಳಿದ್ದರು.

ಆಗಸ್ಟ್ 21ರಂದು ಭಾರತವು ಪಾಕಿಸ್ತಾನಕ್ಕೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಆರನೆ ಮಾಹಿತಿ ಕಡತವನ್ನು ನೀಡಿತ್ತು. ಹಫೀಜ್ ಸಯೀದ್ ಹಾಗೂ ಜಾಕಿರ್ ಉರ್ ರೆಹಮಾನ್ ಲಕ್ವಿ ವಿರುದ್ಧ ಇಂಟರ್‌ಪೊಲ್ ಮಂಗಳವಾರ ರಾತ್ರಿ ರೆಡ್ ಕಾರ್ನರ್ ನೋಟೀಸ್ ಹೊರಡಿಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ