ಕಳೆದ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ನಡೆಸಿರುವ ದಾಳಿ ಪ್ರಕರಣದ ತೀರ್ಪು ಸೆಪ್ಟೆಂಬರ್ 15ರೊಳಗೆ ಹೊರಬೀಳುವ ಸಾಧ್ಯತೆ ಇದೆ ಎಂಬುದಾಗಿ ಮಹಾರಾಷ್ಟ್ರ ಗೃಹ ಸಚಿವ ಜಯಂತ್ ಪಾಟೀಲ್ ಅವರು ನೀಡಿರುವ ಹೇಳಿಕೆಯು ವಿಚಾರಣಾ ನ್ಯಾಯಾಲಯದಲ್ಲಿ ಕಸಿವಿಸಿ ಉಂಟು ಮಾಡಿದೆ.
ಪಾಟೀಲ್ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂಬುದಾಗಿ ಸರ್ಕಾರಿ ವಕೀಲ ಉಜ್ವಲ್ ನಿಕಂ ಹೇಳಿದ್ದರೆ, ಪ್ರಕರಣದ ಹೇಳಿಕೆಯನ್ನು ತ್ವರಿತವಾಗಿ ನೀಡಲಾಗದು; ಆದರೆ ಸಚಿವರು ಈ ಹೇಳಿಕೆ ನೀಡಿದ್ದು ಹೇಗೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ತಹಿಲಿಯಾನಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 15ರೊಳಗೆ ಸಾಕ್ಷ್ಯ ಪ್ರಕ್ರಿಯೆ ಮುಗಿಯುತ್ತದೆ ಎಂದು ಪಾಟೀಲ್ ಹೇಳಿದ್ದರು. ಆದರೆ ಅವರು ತೀರ್ಪು ನೀಡಿಕೆ ಕುರಿತು ಏನನ್ನೂ ಹೇಳಿರಲಿಲ್ಲ ಎಂಬುದಾಗಿ ನಿಕಂ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.