ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೋಕ್ರಾನ್II ಯಶಸ್ವಿಯಾಗಿರಲಿಲ್ಲ, ಸಿಟಿಬಿಟಿಗೆ ಸಹಿಬೇಡ (India | CTBT, Pokhran II | DRDOS | CTBT)
 
1998ರ ನೇ ತಿಂಗಳಲ್ಲಿ ಪೋಕ್ರಾನ್‌ನಲ್ಲಿ ನಡೆಸಿದ್ದ ಅಣ್ವಸ್ತ್ರ ಪರೀಕ್ಷೆಯು ಅರೆವಾಸಿ ಯಶಸ್ವಿಯಾಗಿತ್ತು ಮತ್ತು ಅದರ ಫಲಿತಾಂಶಗಳು ನಿರೀಕ್ಷೆಗಿಂತ ತುಂಬ ಕೆಳಮಟ್ಟದಲ್ಲಿತ್ತು ಎಂಬುದಾಗಿ ಪೋಕ್ರಾನ್II ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿಆರ್‌ಡಿಒ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಇದರಿಂದಾಗಿ ಭಾರತದ ಅಣ್ವಸ್ತ್ರ ಸಾಮರ್ಥ್ಯವನ್ನೇ ಪ್ರಶ್ನಿಸುವಂತಾಗಿದೆ.

ಗುರುವಾರ ಆಂಗ್ಲ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯೊಂದರಲ್ಲಿ ವಿಜ್ಞಾನಿ ಕೆ. ಸಂತಾನಂ ಎಂಬವವರು ಈ ವಿಚಾರವನ್ನು ಎತ್ತಿರುವುದಾಗಿ ಪ್ರಕಟಿಸಲಾಗಿದೆ. ಅವರು ಪೋಕ್ರಾನ್ II ಯೋಜನೆಯ ಪ್ರತಿನಿಧಿಗಳಲ್ಲೊಬ್ಬರಾಗಿದ್ದರು.

ಭಾರತವು ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ (ಸಿಟಿಬಿಟಿ) ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಇನ್ನಷ್ಟು ಅಣ್ವಸ್ತ್ರ ಪರೀಕ್ಷೆಗಳನ್ನು ಮಾಡಬೇಕು ಮತ್ತು ಅಣ್ವಸ್ತ್ರ ಯೋಜನೆಯ ಕುರಿತು ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಂತಾನಂ ಆಗ್ರಹಿಸಿದ್ದಾರೆ.

1988ರ ಪರೀಕ್ಷೆ ವೇಳೆಗೆ ಅಣ್ವಸ್ತ್ರ ಪರೀಕ್ಷಾ ಸ್ಥಳ ಸಿದ್ಧತೆಯ ನಿರ್ದೇಶಕರಾಗಿದ್ದ ಸಂತಾನಂ ಅವರು ಥರ್ಮೋ‌ನ್ಯೂಕ್ಲಿಯರ್ ಪರೀಕ್ಷೆ ಅಥವಾ ಹೈಡ್ರೋಜನ್ ಬಾಂಬ್‍ನ ಪರೀಕ್ಷಾ ಫಲಿತಾಂಶವು ಹೇಳಿಕೊಂಡದ್ದಕ್ಕಿಂತ ತುಂಬ ಕಮ್ಮಿ ಇತ್ತು ಎಂಬುದಾಗಿ ಹೇಳಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೋಕ್ರಾನ್ ಪರೀಕ್ಷೆಯು ಮಹಾ ಸ್ಫೋಟವೇನು ಆಗಿರಲಿಲ್ಲ ಬದಲಿಗೆ ಅದೊಂದು ಚಿರಿಪಿರಿ ಮಾತ್ರವಾಗಿತ್ತು ಎಂಬುದಾಗಿ ಸಂತಾನಂ ಹೇಳಿದ್ದಾರೆ.

ಪೋಕ್ರಾನ್‌ನಲ್ಲಿ ಎರಡನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ತಕ್ಷಣ ಭಾರತದ ಅಧಿಕಾರಿಗಳು ಇದೊಂದು ಭಾರೀಯಶಸ್ಸು ಅಂದಿದ್ದರು. ಇದು 45 ಕಿಲೋಟನ್‌ಗಳ ಫಲನೀಡಿದೆ ಎಂಬುದಾಗಿ ಭಾರತ ಹೇಳಿಕೊಂಡಿದ್ದರೂ, ಪಾಶ್ಚಾತ್ಯ ತಜ್ಞರು ಇದು ಕೇವಲ 20ಕಿಲೋಟನ್‌ಗಳ ಫಲನೀಡಿದೆ ಎಂದು ಹೇಳಿತ್ತು.

ಅಣುವಿಜ್ಞಾನಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೂ ಪೋಕ್ರಾನ್ ಪರೀಕ್ಷೆ ಸಂಪೂರ್ಣ ಯಶಸ್ಸು ಎಂಬುದಾಗಿ ಹೇಳಿದ್ದರು.

ಇದೇ ವೇಳೆ ಸಂತಾನಂ ಅವರ ಈ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯವು ಭಾರತವು ಅರ್ಥಪೂರ್ಣ ನ್ಯೂಕ್ಲಿಯರ್ ಯೋಜನೆ ಹೊಂದಿದೆ ಎಂಬುದಾಗಿ ಹೇಳಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ