ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರ್ದಾರ್ ಪಟೇಲ್ ವಿರೋಧಿ ಪುಸ್ತಕ ಗುಜರಾತಿನ ಆರೆಸ್ಸೆಸ್ ಕಚೇರಿಯಿಂದಲೇ ಮಾರಾಟ (Sardar Patel | RSS HQ | Gujarat | Narendra Modi)
ಸರ್ದಾರ್ ಪಟೇಲ್ ವಿರೋಧಿ ಪುಸ್ತಕ ಗುಜರಾತಿನ ಆರೆಸ್ಸೆಸ್ ಕಚೇರಿಯಿಂದಲೇ ಮಾರಾಟ
ಅಹಮದಾಬಾದ್, ಗುರುವಾರ, 27 ಆಗಸ್ಟ್ 2009( 12:46 IST )
ಸರ್ಕಾರ್ ವಲ್ಲಭ ಭಾಯ್ ಪಟೇಲ್ ಅವರನ್ನು ಹೀಗಳೆಯಲಾಗಿದೆ ಎಂಬ ಕಾರಣಕ್ಕೆ ಗುಜರಾತ್ ಸರ್ಕಾರ ಬಿಜೆಪಿಯಿಂದ ಉಚ್ಚಾನೆಗೊಂಡಿರುವ ಜಸ್ವಂತ್ ಸಿಂಗ್ ಅವರ ಪುಸ್ತಕವನ್ನು ಗುಜಾರಾತಿನಲ್ಲಿ ನಿಷೇಧಿಸಿರಬಹುದು. ಆದರೆ ಇನ್ನೊಂದೆಡೆ, ಸರ್ದಾರ್ ಪಟೇಲ್ ಭಾರತದ ವಿಭಜನೆಗೆ ಆತುರ ತೋರಿದ್ದರು ಎಂಬ ಅಭಿಪ್ರಾಯವಿರುವ, ಆರ್ಎಸ್ಎಸ್ ಸಿದ್ಧಾಂತವಾದಿ ಹೂ.ವೆ. ಶೇಷಾದ್ರಿ ಅವರ ಪುಸ್ತಕವು ಕಳೆದ 27 ವರ್ಷಗಳಿಂದ ಇಲ್ಲಿ ಪ್ರಸಾರದಲ್ಲಿದೆ. ವಿಶೇಷವೆಂದರೆ ಇದು ಗುಜರಾತಿನ ಆರ್ಎಸ್ಎಸ್ ಮುಖ್ಯಕಚೇರಿಯ ಸಂಕೀರ್ಣದಿಂದಲೇ ಮಾರಾಟವಾಗುತ್ತಿದೆ.
ಆದರೆ ಇದು ಗುಜರಾತ್ ಮುಖ್ಯಮಂತ್ರಿ ಮೋದಿಯವರ ಗಮನಕ್ಕೆ ಬಂದಿಲ್ಲದಿರುವ ಸಾಧ್ಯತೆ ತುಂಬ ಕಡಿಮೆ. ಯಾಕೆಂದರೆ ಅವರು ಈ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಮೋದಿ ಅವರು 1967ರಿಂದ 1980ರ ತನಕ ಪ್ರಚಾರಕ್ ಆಗಿ ಹದಿಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಈ ಪುಸ್ತಕ 1982ರಲ್ಲಿ ಪ್ರಕಟಗೊಂಡಿದೆ.
ವಿಭಜನೆಯ ದುರಂತ ಕಥೆ (ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್) ಎಂಬ ಹೆಸರಿನ ಈ ಪುಸ್ತಕದಲ್ಲಿ ನೆಹರೂ ಹಾಗೂ ಪಟೇಲ್ ಅವರ ಉಲ್ಲೇಖವಿದೆ. ಶೇಷಾದ್ರಿ ಅವರು ಈ ಇಬ್ಬರು ಭಾರತದ ವಿಭಜನೆಗೆ ಕಾರಣ ಎಂದು ಹೇಳಿದ್ದಾರೆ. ಜಸ್ವಂತ್ ಅವರು ತಮ್ಮ ಪುಸ್ತಕ 'ಜಿನ್ನಾ: ಇಂಡಿಯಾ, ಇಂಡಿಪೆಂಡೆನ್ಸ್, ಪಾರ್ಟಿಶನ್' ಎಂಬ ಪುಸ್ತಕದಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಸಾಧನ ಟ್ರಸ್ಟ್‌ನಲ್ಲಿ ಈ ಪುಸ್ತಕ ಇನ್ನೂ ಮಾರಾಟವಾಗುತ್ತಿದೆ. ಇದು ಆರ್ಎಸ್ಎಸ್ ಮುಖ್ಯ ಕಚೇರಿ ಸಂಕೀರ್ಣದ ಒಂದು ಭಾಗವಾಗಿದೆ. ಇಲ್ಲಿ 100 ರೂಪಾಯಿಗೆ ಈ ಪುಸ್ತಕ ಮಾರಾಟವಾಗುತ್ತಿದೆ ಎಂಬುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ.