ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಟ್ಟುಹಬ್ಬಕ್ಕೆ ಚಂದಾ ಎತ್ತುವುದನ್ನು ನಿಲ್ಲಿಸಿ: ಮಾಯಾವತಿ (Mayawati | Bahujan Samaj Party | BSP | Uttar Pradesh)
 
Mayawati
PTI
ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಇದೀಗ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಚಂದಾ ಎತ್ತುವುದನ್ನು ಈಗಿನಿಂದಲೇ ನಿಲ್ಲಿಸಿ ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ದಿಢೀರ್ ಆಜ್ಞೆ ಹೊರಡಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕವಾಗಿ ಚಂದಾ ಎತ್ತುವುದು ಸಾಕಷ್ಟು ಟೀಕೆಗಳಿಗೆ ಒಳಗಾಗಿತ್ತು. ಜನವರಿ 15ರಂದು ಅವರ ಹುಟ್ಟುಹಬ್ಬ. ಮಾಯಾವತಿ 1956ರ ಜನವರಿ 15ರಂದು ಜನಿಸಿದ್ದು ಅವರ ಜನ್ಮದಿನವನ್ನು ಆರ್ಥಿಕ ಸಹಯೋಗ ದಿವಸ ಎಂದು ಬಿಎಸ್‌ಪಿ ಆಚರಿಸುತ್ತದೆ.

ಬಿಎಸ್‌ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ದೇಶದೆಲ್ಲೆಡೆಯಿಂದ ಬಂದ ಬಿಎಸ್‌ಪಿ ನಾಯಕರೂ ಸೇರಿದಂತೆ ಇಡೀ ಪಕ್ಷವನ್ನುದ್ದೇಶಿಸಿ ಮಾಯಾವತಿ ಅವರು, ಮುಂದಿನ ಹುಟ್ಟುಹಬ್ಬಕ್ಕೆ ಹೀಗೆ ಮತ್ತೆ ಚಂದಾ ಎತ್ತಬೇಡಿ ಎಂದು ಸೂಚನೆ ನೀಡಿದರು.

ಮಾಯಾವತಿ ಅವರು ಈ ನಿರ್ಧಾರಕ್ಕೆ ಬರಲು ಹಲವರು ಈ ಬಗ್ಗೆ ಭಾರೀ ಟೀಕಾ ಪ್ರಹಾರಗಳನ್ನೇ ಮಾಡಿದ್ದರ ಫಲ ಎಂದೂ ವಿಮರ್ಶಿಸಲಾಗುತ್ತಿದೆ. ಆಲ್ಲದೆ, ಕಳೆದ ಡಿ.24ರಂದು ಪಿಡಬ್ಲ್ಯುಡಿ ಇಂಜಿನಿಯರ್ ಮನೋಜ್ ಕುಮಾರ್ ಗುಪ್ತಾ ಅವರನ್ನು ಮಾಯಾವತಿ ಹುಟ್ಟುಹಬ್ಬಕ್ಕೆ ಹಣ ನೀಡಿಲ್ಲವೆಂಬ ಕಾರಣಕ್ಕೆ ಬಿಎಸ್‌ಪಿ ಶಾಸಕರೊಬ್ಬರು ಕೊಲೆ ಮಾಡಿದ್ದರು ಎನ್ನುವ ಆರೋಪ ಇದೆ. ಆ ಸಂದರ್ಭ ಮಾಯಾವತಿ ಅವರು, ನನ್ನ ಪಕ್ಷ ಬಿಎಸ್‌ಪಿಗೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಂತೆ ಉದ್ಯಮಗಳ ಹಾಗೂ ಕೈಗಾರಿಕೆಯ ಆರ್ಥಿಕ ಸಹಕಾರವಿಲ್ಲ. ಹಾಗಾಗಿ ನನ್ನ ಹಾಗೂ ಪಕ್ಷದ ಸಂಸ್ಥಾಪಕ ಕಾನ್ಶೀರಾಮರ ಹುಟ್ಟುಹಬ್ಬಗಳಿಗೆ ಚಂದಾ ಎತ್ತಿದರಷ್ಟೆ ಸಾಧ್ಯ ಎಂದಿದ್ದರು.

ಇದಲ್ಲದೆ ಬಿಎಸ್‌ಪಿ ಪಕ್ಷದ ಸದಸ್ಯತ್ವ ಶುಲ್ಕವನ್ನೂ ಮಾಯಾವತಿ ಅವರು ಇತ್ತೀಚೆಗೆ 20 ರೂಪಾಯಿಗಳಿಂಗ 40 ಕೂಪಾಯಿಗಳಿಗೆ ಏರಿಸುವುದಾಗಿ ಹೇಳಿದ್ದಾರೆ. ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಲು ಮುಂದಿನ ಮಾರ್ಚ್ ತಿಂಗಳಿಡೀ ಸದಸ್ಯತ್ವ ಅಭಿಯಾನವೂ ನಡೆಯಲಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ