ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 3.5 ಗಂಟೆಯಲ್ಲಿ 14 ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಎಲ್ಲ ದಾಖಲೆಗಾಗಿ? (Breast Cancer | Madurai Government Rajaji Hospital | Oncology)
3.5 ಗಂಟೆಯಲ್ಲಿ 14 ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಎಲ್ಲ ದಾಖಲೆಗಾಗಿ?
ಚೆನ್ನೈ/ ಮಧುರೈ, ಶುಕ್ರವಾರ, 28 ಆಗಸ್ಟ್ 2009( 16:40 IST )
ಇದು ವೈದ್ಯಲೋಕದ ಅಚ್ಚರಿ. ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯ ವೈದ್ಯರು ಕೇವಲ ಮೂರುವರೆ ಗಂಟೆಯಲ್ಲಿ ಒಟ್ಟು 14 ಸ್ತ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಆಸ್ಪತ್ರೆ ಇಡೀ ಶಸ್ತ್ರಚಿಕಿತ್ಸೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದು ಗಿನ್ನಿಸ್ ದಾಖಲೆಯ ಸಂಸ್ಥೆಗೆ ಕಳುಹಿಸಿ ಕೊಡಲಾಗುತ್ತದೆ ಎಂದು ವೈದ್ಯರು ಹೇಳಿಕೊಂಡಿದ್ದಾರೆ.
ಆದರೆ ರಾಜ್ಯ ಸರ್ಕಾರ ಮಾತ್ರ ಈ ಹೆಜ್ಜೆಯನ್ನು ಬಲವಾಗಿ ವಿರೋಧಿಸಿದೆ. ರಾಜಾಜಿ ಸರ್ಕಾರಿ ಆಸ್ಪತ್ರೆ ಈ ರೀತಿಯ ದಾಖಲೆಯನ್ನು ಮಾಡಲು ಬಿಡುವುದಿಲ್ಲ. ಅವರು ಹೀಗೆ ಮಾಡಬೇಕೆಂದರೆ ಸರ್ಕಾರದ ಅನುಮತಿಯಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯಶಿಕ್ಷಣ ನಿರ್ದೇಶಕ ಡಾ|ಎಸ್.ಶ್ರೀನಿವಾಸನ್ ಹೇಳಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿ ವಿ.ಕೆ.ಸುಬ್ಬರಾಜ್ ಹೇಳುವಂತೆ, ನಾವು ಇದಕ್ಕೆ ಅನುಮತಿ ನೀಡುವುದಿಲ್ಲ. ಶಸ್ತ್ರ ಚಿಕಿತ್ಸೆಯಲ್ಲಿ ನಾಜೂಕುತನವಷ್ಟೇ ಮುಖ್ಯ. ದಾಖಲೆಯ ನೆಪದಲ್ಲಿ ರೋಗಿಯ ಜೀವನ ಬಲಿಕೊಡುವುದಕ್ಕೆ ನಾವು ಬಿಡುವುದಿಲ್ಲ ಎಂದಿದ್ದಾರೆ.
ರಾಜಾಜಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಡಾ. ಬಿ.ಕೆ.ಸಿ.ಆ್. ಮೋಹನ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಸೇರಿದಂತೆ ಆಸ್ಪತ್ರೆಯ ಮೂವರು ವೈದ್ಯರು (ಡಾ.ಆರ್.ಚಂದ್ರಶೇಖರ್ ಹಾಗೂ ಡಾ.ಗೋಪಿನಾಥ್) ಆ.24ರಂದು ಬೆಳಿಗ್ಗೆ 8.30ರಿಂದ ಮೂರುವರೆ ಗಂಟೆಗಳ ಅವಧಿಯಲ್ಲಿ ಒಂದಾದ ಮೇಲೊಂದರಂತೆ 14 ಸ್ತ ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಪೂರೈಸಿದ್ದೇವೆ ಎಂದು ವಿವರಿಸಿದರು.
ಒಂದೇ ಸಲ ನಾಲ್ಕು ರೋಗಿಯನ್ನು ಮಲಗಿಸಿ ಶಸ್ತ್ರಚಿಕಿತ್ಸೆ ಮಾಡಿದೆವು. ಪ್ರತಿ ರೋಗಿಯ ಸ್ತನವನ್ನು ಓಪನ್ ಮಾಡಿ ಒಳಗಿರುವ ಗಡ್ಡೆ ತೆಗೆದು ಮುಂದಿನ ರೋಗಿಯೆಡೆಗೆ ಹೋಗುತ್ತಿದ್ದೆವು. ನಂತರದ ಕಾರ್ಯಗಳನ್ನು ಸಹಾಯಕರು ಹಾಗೂ ವಿದ್ಯಾರ್ಥಿಗಳು ಮಾಡುತ್ತಿದ್ದರು. ನಾನು ನಾಲ್ಕನೇ ರೋಗಿಯ ಬಳಿ ಹೋಗುವಷ್ಟರಲ್ಲಿ ಮೊದಲನೇ ರೋಗಿಯ ಪೂರ್ಣ ಶಸ್ತ್ರಚಿಕಿತ್ಸೆ ಮುಗಿಸಿ ಮತ್ತೊಂದು ಕೋಣೆಗೆ ಕರೆದೊಯ್ಯಲಾಗುತ್ತಿತ್ತು. ಅಷ್ಟು ವೇಗವಾಗಿ ಶಸ್ತ್ರ ಚಿಕಿತ್ಸೆ ಪೂರೈಸಿದೆವು ಎಂದು ಡಾ.ಪ್ರಸಾದ್ ವಿವರಿಸಿದರು.
ಈ ಸುದ್ದಿ ಕೇಳಿ ವೈದ್ಯಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ. ಸ್ವತಃ ತಮಿಳುನಾಡು ಮೆಡಿಕಲ್ ಕೌನ್ಸಿಲ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಇದೊಂದು ವೈದ್ಯ ವೃತ್ತಿಧರ್ಮವನ್ನೇ ಉಲ್ಲಂಘಿಸಿದಂತೆ ಎಂದು ದೂರಿದೆ.