ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎಗೆ ಬೆಂಬಲ ನೀಡಿದ್ದೊಂದು ಐತಿಹಾಸಿಕ ಪ್ರಮಾದ: ಅಮರ್ ಸಿಂಗ್ (Samajwadi Party | Amar Singh | Trust vote | Congress)
 
PTI
ಕಳೆದ ವರ್ಷ ಯುಪಿಎ ಸರ್ಕಾರ ವಿಶ್ವಾಸಮತ ಯಾಚನೆ ಮಾಡಿದ್ದ ವೇಳೆ ಅದಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಂಡಿರುವುದು ನಾವು ಎಸಗಿರುವ 'ಐತಿಹಾಸಿಕ ಪ್ರಮಾದ' ಎಂಬುದಾಗಿ ಸಮಾಜವಾದಿ ಪಕ್ಷ ಹೇಳಿದೆ.

"ಕಳೆದ ವರ್ಷ ವಿಶ್ವಾಸಮತ ಯಾಚನೆ ವೇಳೆಗೆ ಸರ್ಕಾರವನ್ನು ಬೆಂಬಲಿಸಿರುವುದು ಒಂದು ಐತಿಹಾಸಿಕ ಪ್ರಮಾದ" ಎಂಬುದಾಗಿ ಸಮಾಜವಾದಿ ಪಕ್ಷ(ಎಸ್ಪಿ) ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಹೇಳಿದ್ದಾರೆ. ನಿಮ್ಮ ಪಕ್ಷಕ್ಕೆ ಕಾಂಗ್ರೆಸ್ ವಂಚಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಅಂತಹ ಕಟು ಶಬ್ದವನ್ನು ಕಾಂಗ್ರೆಸ್ ವಿರುದ್ಧ ಬಳಸಲು ಬಯಸುವುದಿಲ್ಲ. ಆದರೆ ಕಾಂಗ್ರೆಸ್‌ನಿಂದ ಭ್ರಮನಿರಸನವಾಗಿದೆ" ಎಂದು ನುಡಿದರು.

ಕಾಂಗ್ರೆಸ್ಸನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿರುವುದಕ್ಕೆ ಪಕ್ಷದೊಳಗಿನಿಂದಲೇ ಪ್ರತಿರೋಧ ಎದುರಿಸಬೇಕಾಯಿತು. ಹೀಗಿದ್ದರೂ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಬಳಿಕ ಎಸ್ಪಿಯೊಂದಿಗೆ ಅತ್ಯಂತ ಕ್ಷುಲ್ಲಕವಾಗಿ ನಡೆದುಕೊಂಡಿತು ಎಂದು ಅವರು ದೂರಿದರು.

ಕಾಂಗ್ರೆಸ್ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ನಾವು ಅವರಿಗೆ ಬೆಂಬಲ ನೀಡಿದ್ದೆವು. ಪಂಜಾಬ್, ಉತ್ತರಖಾಂಡ್ ಸೇರಿದಂತೆ ಕಾಂಗ್ರೆಸ್ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು. ಆದರೆ ಲೋಕಸಭಾ ಚುನಾವಣೆಯ ಬಳಿಕ ಅದು ನಮ್ಮನ್ನು ಮರೆತಿದೆ ಎಂದು ಅವರು ಆಪಾದಿಸಿದರು.

ಲೋಕಸಭಾ ಚುನಾವಣೆಯ ಬಳಿಕ ನಮ್ಮ ಪಕ್ಷವು ಯಾವುದೇ ಫಲಾಪೇಕ್ಷೆ ಇಲ್ಲದೆ ಯುಪಿಎ ಸರ್ಕಾಕ್ಕೆ ಬೆಂಬಲ ನೀಡಿದ್ದರೂ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕನಿಷ್ಠಪಕ್ಷ ಧನ್ಯವಾದ ಸಲ್ಲಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಎಸ್ಪಿಯು ತನ್ನ ನಾಯಕರ ಪ್ರಕರಣಗಳನ್ನು ಮುಚ್ಚಿಡಲು ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು "ವ್ಯವಹಾರದ ಹಿಂದೆ ಯಾವುದೇ ವ್ಯವಹಾರವಿಲ್ಲ" ಎಂದು ನೋಡಿದರು.

ಕಳೆದ ಬಾರಪಿಯ ಯುಪಿಎ ಸರ್ಕಾರದ ಅವಧಿಯಲ್ಲಿ ಅಮೆರಿಕದೊಂದಿಗಿನ ಅಣುಒಪ್ಪಂದಕ್ಕೆ ಸಹಿ ಹಾಕುವ ಸರ್ಕಾರದ ನಿರ್ಧಾರವನ್ನು ಎಡಪಕ್ಷಗಳು ಧಿಕ್ಕರಿಸಿ ಬೆಂಬಲ ವಾಪಾಸ್ ಪಡೆದಿದ್ದಾಗ ಸರ್ಕಾರ ಅಲ್ಪಸಂಖ್ಯಾತವಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿದ್ದಾಗ ಸಮಾಜವಾದಿ ಪಕ್ಷ ಬೆಂಬಲ ನೀಡಿತ್ತು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ