ಶುಕ್ರವಾರ ನಾಪತ್ತೆಯಾಗಿದ್ದ 26/11ರ ಮುಂಬೈ ಉಗ್ರರ ದಾಳಿಯ ಪ್ರಮುಖ ಸಾಕ್ಷಿ ನೂರುದ್ದೀನ್ ಶೇಖ್ ಅವರನ್ನು ಕ್ರೈಂ ಬ್ರಾಂಚ್ ಕೊನೆಗೂ ಅವರ ಗೆಳೆಯರ ಮನೆಯಲ್ಲಿ ಪತ್ತೆಹಚ್ಚಿದೆ. ಸೋಮವಾರ ಶೇಖ್ ಅವರನ್ನು ಹೆಚ್ಚಿನ ವಿಚಾರಣೆಗೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
26/11 ಮುಂಬೈ ದಾಳಿ ಸಂಚಿನಲ್ಲಿ ಸಬಾಹುದ್ದೀನ್ ಮತ್ತು ಅನ್ಸಾರಿ ಪಾತ್ರದ ಬಗ್ಗೆ ನುರೂದ್ದಿನ್ ಮೆಹಬೂಬ್ ಶೇಕ್ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಗಮನಸೆಳೆದಿದ್ದ. ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಹೇಳುವಂತೆ, ನಾವು ಕೇಳ್ಪಟ್ಟಂತೆ ಶೇಖ್ ಅವರು ಕೋರ್ಟಿಗೆ ಹಾಜರಾಗಲು ಬೆಳಗ್ಗಿನ ಜಾವವೇ ಹೊರಟಿದ್ದರು. ಆದರೆ ಅವರು ಕೋರ್ಟ್‌ಗೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ತನಿಖೆ ಮುಂದುವರಿಸಿತ್ತು ಎಂದಿದ್ದಾರೆ.
ಶೇಖ್ ಅವರು ಅನ್ಸಾರಿ ಅವರ ಬಾಲ್ಯದ ಮಿತ್ರನಾಗಿದ್ದು, ವೃತ್ತಿಯಲ್ಲಿ ಚಾಲಕರಾಗಿದ್ದಾರೆ. ಗುರುವಾರ ಅವರು ಕೋರ್ಟಿನಲ್ಲಿ 2008ರಲ್ಲಿ ಕಠ್ಮಂಡುವಿನಲ್ಲಿ ಫಾಹಿಮ್ ಅವರು ಸಬಾವುದ್ದೀನ್ ಅಹಮ್ಮದ್ ಅವರನ್ನು ಭೇಟಿಯಾದಾಗ ಸ್ಥಳದಲ್ಲಿ ನಾನಿದ್ದೆ ಎಂದಿದ್ದರು.
ಆದರೆ ನಂತರ ಕಾಣೆಯಾದ ಶೇಖ್ ಅವರನ್ನು ಹುಡುಕಲು ಕ್ರೈಂ ಬ್ರಾಂಚ್‌ನ ಮೂರು ತಂಡಗಳು ಇಡೀ ನಗರವನ್ನೇ ಜಾಲಾಡಿದ್ದು, ಕೊನೆಗೂ ಶೇಖ್ ಅವರು ತಮ್ಮ ಗೆಳೆಯನ ಮನೆಯ್ಲಲಿರುವುದನ್ನು ಪತ್ತೆಹಚ್ಚಿದ್ದಾರೆ. ಸೋಮವಾರ ಶೇಖ್ ಅವರನ್ನು ಹೆಚ್ಚಿನ ವಿಚಾರಣೆಗೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
ಫಾಹೀಂ ಮತ್ತು ಸಬಾವುದ್ದೀನ್ ಇಬ್ಬರೂ ಭಾರತೀಯ ಪೌರರಾಗಿದ್ದು, ಪಾಕಿಸ್ತಾನದ ಪೌರ, ಮುಂಬೈ ದಾಳಿಯ ಆರೋಪಿ ಅಜ್ಮಲ್ ಅಮೀರ್ ಕಸಬ್ ಜತೆ ವಿಚಾರಣೆ ಎದುರಿಸುತ್ತಿದ್ದಾರೆ. ಮುಂಬೈ ಚಾಲಕ ಶೇಖ್ ತಾನು ಮತ್ತು ಅನ್ಸಾರಿ ಮುಂಬೈನಲ್ಲಿ ಒಂದೇ ಬೀದಿಯ ನಿವಾಸಿಗಳಾಗಿದ್ದು 30 ವರ್ಷಗಳಿಂದ ತಿಳಿದಿರುವುದಾಗಿ ಸಾಕ್ಷಿ ಹೇಳಿದ್ದ. ನೇಪಾಳದಲ್ಲಿ ಕೂಡ ಅನ್ಸಾರಿ ಕೋಣೆಗೆ ಭೇಟಿ ಕೊಟ್ಟಿದ್ದಾಗಿ ಅವನು ಹೇಳಿದ್ದಾಗಿ ಅಲ್ಲಿನ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ.
ನೇಪಾಳಕ್ಕೆ ತಾನು 2008ರ ಜನವರಿಯಲ್ಲಿ ಭೇಟಿ ಕೊಟ್ಟಿದ್ದಾಗ ಕಾಠ್ಮಂಡುವಿನಲ್ಲಿ ಅನ್ಸಾರಿಯನ್ನು ಭೇಟಿ ಮಾಡಿದೆ. ಅನ್ಸಾರಿ ತನ್ನನ್ನು ಅತಿಥಿಗೃಹಕ್ಕೆ ಆಹ್ವಾನಿಸಿದ್ದ. ಅಷ್ಟರಲ್ಲಿ ಸಬಾವುದ್ದೀನ್ ಕೋಣೆಗೆ ಬಂದು ಲಖ್ವಿ ನೀಡಿದ ಕೆಲಸವನ್ನು ನೀನು ಮಾಡಿದ್ದೀಯ ಎಂದು ಅನ್ಸಾರಿಯನ್ನು ಕೇಳಿದ್ದಾಗಿ ಶೇಖ್ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಝಾಕಿವುರ್ ರೆಹ್ಮಾನ್ ಲಖ್ವಿ ಲಷ್ಕರೆ ತೊಯ್ಬಾ ಮುಖ್ಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟಡ್ ಪಟ್ಟಿಯಲ್ಲಿದ್ದಾನೆ.