ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಿಂಗ ಬದಲಿಸಿದವರಿಗೆಂದೇ ಪುದುಚೇರಿಯಲ್ಲೊಂದು ಸ್ಪೆಷಲ್ ಕ್ಲಿನಿಕ್! (Transgenders | HIV+ | NGO | Mahatma Gandhi Medical College and Research Institute)
 
ಸಮಾಜದಿಂದ ನಿಕೃಷ್ಟವಾಗಿ ಕಾಣಲ್ಪದು ಲಿಂಗ ಬದಲಾವಣೆ ಮಾಡಿಕೊಂಡವರಿಗೆಂದೇ ಈಗ ಹೊಸ ಕ್ಲಿನಿಕ್ ತೆರೆದಿದೆ. ಲಿಂಗ ಬದಲಾವಣೆ ಮಾಡಿಕೊಂಡ ಚೆನ್ನೈಯ ಕೆಲ ಮಂದಿ ಇತ್ತೀಚೆಗೆ ವಿವಾಹವೇದಿಕೆಯ ವೆಬ್‌ಸೈಟನ್ನು ಆರಂಭಿಸಿದ್ದು ಸುದ್ದಿಯಾಗಿತ್ತು. ಇದೀಗ ಪುದುಚೇರಿಯಲ್ಲಿ ಮಹಾತ್ಮಾ ಗಾಂಧಿ ವೈದ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಲಿಂಗ ಬದಲಾವಣೆ ಮಾಡಿಕೊಂಡವರಿಗೆಂದೇ ಪುಟ್ಟ ಕ್ಲಿನಿಕ್ ಒಂದನ್ನು ತೆರೆದಿದೆ. ಇದು ದಕ್ಷಿಣ ಭಾರತದಲ್ಲೇ ಮೊದಲು.

ಈ ಕ್ಲಿನಿಕ್ ಲಿಗ ಬದಲಾವಣೆ ಮಾಡಿಕೊಂಡವರ ಆರೋಗ್ಯದ ಸಂಪೂರ್ಣ ಕಾಳಜಿ ವಹಿಸುತ್ತದೆ. ಅವರ ದೈಹಿಕ ಆರೋಗ್ಯ ಸಮಸ್ಯೆಗಳು, ಮಾನಸಿಕ ಹಾಗೂ ಲೈಂಗಿಕ ಸಮಸ್ಯೆಗಳಿಗೂ ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಲಭ್ಯವಿದೆ. ಇದು ವಾರದಲ್ಲಿ ಮೂರು ದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತೆರೆದಿರಲಿದೆ ಎಂದು ಪ್ರೊ.ಡಿ.ಆರ್.ಗುಣಶೇಖರನ್ ಹೇಳಿದ್ದಾರೆ.

ಆ.24ರಂದು ಇದು ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಮೊದಲ ದಿನ 20 ಮಂದಿ ಲಿಂಗ ಬದಲಾವಣೆ ಮಾಡಕೊಂಡವರ ದೈಹಿಕ ಪರೀಕ್ಷೆ ನಡೆಸಿದೆ. ಅಲ್ಲದೆ, ಇಂಥವರಿಗೆ ಸಾಮಾನ್ಯವಾಗಿ ಬರುವ ಎಚ್‌ಐವಿ, ಅಂಗಾಂಗಗಳ ದುರ್ಬಲತೆ, ಹಾಗೂ ಚರ್ಮದ ತೊಂದರೆಗಳಿಗೆ ಚಿಕಿತ್ಸೆ ಇಲ್ಲಿದೆ. ವಿಶ್ವದೆಲ್ಲೆಡೆಯ ನುರಿತ ತಜ್ಞ ವೈದ್ಯರನ್ನು ಇಲ್ಲಿಗೆ ಕರೆಸಿ ಚಿಕಿತ್ಸೆ ನೀಡುತ್ತೇವೆ ಎಂದು ಗುಣಶೇಖರನ್ ವಿವರಿಸಿದರು.

ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯ ಸಹೋದರನ್ ಎಂಬ ಎನ್‌ಜಿಒ ಜತೆಗೆ ಕೈಜೋಡಿಸಿದೆ. ವಿಶ್ವವಿದ್ಯಾನಿಲಯ ಈ ಹೊಸ ಕ್ಲಿನಿಕ್ ಬಗ್ಗೆ ಸಮಾಜದಲ್ಲಿ ಹಾಗೂ ಲಿಂಗ ಬದಲಾವಣೆ ಮಾಡಿಕೊಂಡ ವರ್ಗಕ್ಕೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಹಾಗೂ ವಿವಿಧ ಎನ್‌ಜಿಒಗಳ ಜತೆಗೆ ಮಾತುಕತೆ ನಡೆಸಲು ತಯಾರಿ ನಡೆಸಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ